×
Ad

ಬಿಜೆಪಿ ಸರಕಾರದ ಅವಧಿಯಲ್ಲೇ ಅತೀ ಹೆಚ್ಚು ವಕ್ಫ್ ನೋಟೀಸ್: ಎಚ್.ಎಂ. ರೇವಣ್ಣ

Update: 2024-11-28 22:27 IST

ಎಚ್.ಎಂ.ರೇವಣ್ಣ

ಬೆಂಗಳೂರು: ಬಿಜೆಪಿ ಸರಕಾರ ಆಡಳಿತದ ಅವಧಿಯಲ್ಲಿಯೇ ಬರೋಬ್ಬರಿ 2 ಸಾವಿರಕ್ಕೂ ಅಧಿಕ ನೋಟಿಸ್ ಜಾರಿಗೊಳಿಸಿ ವಕ್ಫ್ ಆಸ್ತಿ ತೆರವುಗೊಳಿಸುವಂತೆ ಸೂಚಿಸಲಾಗಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದ್ದಾರೆ.

ಗುರುವಾರ ನಗರಲ್ಲಿಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರಕಾರದ ಆಡಳಿತದ ಕಾಲದಲ್ಲಿ ಅತಿ ಹೆಚ್ಚು ಅಂದರೆ 2001 ನೋಟೀಸ್ ಅನ್ನು ನೀಡಲಾಗಿದ್ದರೂ ಕೂಡ ಕಾಂಗ್ರೆಸ್ ಸರಕಾರವನ್ನು ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ ಬಿಜೆಪಿಯ ತಾರತಮ್ಯದ ರಾಜಕೀಯ ಎಂದು ಆರೋಪಿಸಿದರು.

ಅದು ಅಲ್ಲದೆ, ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿದಾಗ ಕುಮಾರ ಬಂಗಾರಪ್ಪ ನೇತೃತ್ವದಲ್ಲಿ ಈ ವಕ್ಫ್ ಭೂಮಿ ವಿಚಾರವಾಗಿ ಸಮಿತಿ ರಚಿಸಿತ್ತು. ಆದರೆ ಈಗ ಕುಮಾರ ಬಂಗಾರಪ್ಪ ಅವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜೊತೆ ಸೇರಿ ವಕ್ಫ್ ಸಮಿತಿ ಸರಿಯಾಗಿಲ್ಲ ಎಂದು ಎರಡು ನಾಲಗೆಯ ಮಾತನ್ನು ಆಡುತ್ತಿದ್ದಾರೆ ಎಂದು ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News