×
Ad

ಹೊಳೆನರಸೀಪುರ: ನದಿಗೆ ಜಿಗಿದ ವ್ಯಕ್ತಿಯನ್ನು ಹುಡುಕುವಾಗ ಮತ್ತೆರಡು ಮೃತದೇಹಗಳು ಪತ್ತೆ!

Update: 2023-10-06 21:58 IST

ಹೊಳೆನರಸೀಪುರ: ಹೇಮಾವತಿ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಮೃತದೇಹ ಶೋಧ ನಡಸುತ್ತಿದ್ದ ಸಂದರ್ಭದಲ್ಲಿ ಮತ್ತೆರಡು ಮೃತದೇಹಗಳು ಪತ್ತೆಯಾಗಿದ್ದುರುವುದು ವರದಿಯಾಗಿದೆ. 

ಸ್ಥಳೀಯ ಪ್ರಥಮ ದರ್ಜೆ ಗುತ್ತಿಗೆದಾರ ಕೆ.ಸತ್ತಾರ್ (79) ಗುರುವಾರ ನದಿಗೆ ಹಾರಿದ್ದರು. ಇವರು ನದಿಗೆ ಹಾರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸರಿಯಾಗಿತ್ತು. ಆದರೆ, ಇನ್ನೂ ಅವರ ಪತ್ತೆಯಾಗಿಲ್ಲ, ಶೋಧ ಕಾರ್ಯ ಮುಂದುವರಿದಿದೆ. 

ಶೋಧ ಕಾರ್ಯ ನಡೆಸುತ್ತಿದ್ದ ಸಂದರ್ಭದಲ್ಲಿ, ನಗರದಲ್ಲಿ ನಾಪತ್ತೆಯಾಗಿದ್ದ ಶಿವಣ್ಣ ಎಂಬ ವ್ಯಕ್ತಿಯ ಹಾಗೂ ಇನ್ನೊಂದು ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

ಶಿವಣ್ಣ (70) ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯಾಗಿದ್ದು ಈತ ಕಾಣೆಯಾಗಿರುವ ಬಗ್ಗೆ ಕುಟುಂಬಸ್ಥರು ದೂರು ನೀಡಿದ್ದರು.

ಮತ್ತೊಂದು ಶವ ಪುರುಷನದಾಗಿದ್ದು ಸುಮಾರು 50 ವರ್ಷ ವಯಸ್ಸಿನ ರವನಾಗಿದ್ದು. ಇದು ಅಪರಿಚಿತ ಶವವಾಗಿದೆ ಎಂದು ನಗರ ಠಾಣೆ ಸಬ್ ಇನ್ಸ್ಪೆಕ್ಟರ್ ಅರುಣ್ ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News