×
Ad

ಕಾನ್ಸ್‌ಟೇಬಲ್ ನೇಮಕಾತಿಯ ವಯೋಮಿತಿ ವರದಿ ಬಂದಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್

Update: 2024-08-29 19:46 IST

ಬೆಂಗಳೂರು : ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಸಂಬಂಧ ವಯೋಮಾನ ಹೆಚ್ಚಳ ಬಗ್ಗೆ ವರದಿ ಸಂಪೂರ್ಣ ಬಂದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಕುರಿತು ಬೇರೆ ರಾಜ್ಯಗಳಲ್ಲಿ 40 ವರ್ಷದವರೆಗೆ ಇದೆ. ಅಷ್ಟು ವಯಸ್ಸಿಗೆ ನೇಮಕಾತಿ ಆದರೆ ಹೇಗೆ?. ಅವರಿಗೆ ಸೇವೆ ಎಲ್ಲಿ ಸಿಗುತ್ತೆ?. ಆದರೆ, ಸೇನೆಗೆ 16 ವರ್ಷಕ್ಕೆ ನೇಮಕಾತಿ ಮಾಡಿಕೊಳ್ಳುತ್ತಾರೆ. ನಮಗೆ ಅಷ್ಟು ವಯಸ್ಸಿನ ಅಂತರವೇಕೆ ಎಂದು ಯುವಕರು ಪ್ರಶ್ನಿಸಿದ್ದು, ಈ ಸಂಬಂಧ ವರದಿ ಕೈಸೇರಲಿ. ಆನಂತರ, ಹಣಕಾಸು ಇಲಾಖೆ ಒಪ್ಪಿಗೆ ಪಡೆದು ನೇಮಕಾತಿ ಮಾಡುತ್ತೇವೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News