×
Ad

ಹುಬ್ಬಳ್ಳಿ: ಸ್ಕೂಟರ್ ಬ್ಯಾಗ್ ನಲ್ಲಿದ್ದ ನಗದು ಕಳ್ಳತನ ಪ್ರಕರಣ; ಆರೋಪಿಯ ಬಂಧನ

Update: 2023-10-30 09:36 IST

ಹುಬ್ಬಳ್ಳಿ: ಸ್ಕೂಟರ್ ನ ಬ್ಯಾಗ್ ನಲ್ಲಿದ್ದ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಉಪನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ನಗರದ ಗಿರಣಿಚಾಳದ ನಿಖಿಲ್ ಎಂದು ಗುರುತಿಸಲಾಗಿದೆ. ಬಂಧಿತನಿಂದ 7.97 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ.

ಸುನೀಲ್ ಜಾಡ್ ಎಂಬಾತ ಇದೇ 26 ನೇ ದಿನಾಂಕದಂದು ಹಳೆಯ ಬಸ್ ನಿಲ್ದಾಣ ಬಳಿ ಸ್ಕೂಟರ್ ಬ್ಯಾಗ್ ನಲ್ಲಿ ಇಟ್ಟಿದ್ದ 8 ಲಕ್ಷ ರೂ. ನಗದು ಕಳ್ಳತನವಾಗಿರುವ ಕುರಿತು ಪ್ರಕರಣ ದಾಖಲಾಗಿತ್ತು.

ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News