ಬೆಳಗಾವಿಗೆ ನಾನೇ ʼಹೆಡ್ ಆಫ್ ದಿ ಡಿಪಾರ್ಟ್‍ಮೆಂಟ್ʼ: ಸಚಿವ ಸತೀಶ್ ಜಾರಕಿಹೊಳಿ
Update: 2023-10-29 23:25 IST
ಸಚಿವ ಸತೀಶ್ ಜಾರಕಿಹೊಳಿ
ಕೊಪ್ಪಳ: ನಾನು ಯಾರ ಮೇಲೆಯೂ ಸಿಟ್ಟಾಗುವ ಪ್ರಸಂಗ ಬರುವುದಿಲ್ಲ. ಏಕೆಂದರೆ ಬೆಳಗಾವಿಗೆ ನಾನೇ ಹೆಡ್ ಆಫ್ ದಿ ಡಿಪಾರ್ಟ್‍ಮೆಂಟ್ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ರಾಜಕಾರಣದಲ್ಲಿ ಯಾರ ನಡುವೆಯೂ ಸಮಸ್ಯೆಯಿಲ್ಲ. ಅಲ್ಲಿ ನಾನೇ ಹೆಡ್ ಆಫ್ ದಿ ಡಿಪಾರ್ಟ್‍ಮೆಂಟ್ ಆಗಿದ್ದು, ಎಲ್ಲವೂ ಸರಿಯಾಗಿದೆ ಎಂದು ನುಡಿದರು.
ಇನ್ನೂ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕಡತಗಳು ಕಳವಾಗಿರುವ ಬಗ್ಗೆ ಪೆÇಲೀಸರು ದೂರು ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.