×
Ad

ಇನ್ನು ಮುಂದೆ ನಾನು ನಿದ್ದೆ ಮಾಡಲ್ಲ, ವಿಜಯೇಂದ್ರ ಜೊತೆ ಓಡಾಡಿ ಕೆಲಸ ಮಾಡುತ್ತೇನೆ: ರೇಣುಕಾಚಾರ್ಯ

Update: 2023-11-12 23:50 IST

ದಾವಂಣಗೆರೆ: ''ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ಅವರು ಆಯ್ಕೆಯಾಗಿರುವುದರಿಂದ ಕಾರ್ಯಕರ್ತರು ಮುಖಂಡರಲ್ಲಿ ಹೊಸ ಹುಮ್ಮಸ್ಸು, ಸಂಚಲನ ಮೂಡಿದೆ'' ಎಂದು ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಬಣ್ಣಿಸಿದ್ದಾರೆ.

ದಾವಣಗೆರೆಯ ಬಳಿ ಶಿರಮಗೊಂಡನಹಳ್ಳಿಯಲ್ಲಿ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ''ವಿಜಯೇಂದ್ರ ಜೊತೆ ನಾನು ಕೂಡ ರಾಜ್ಯ ಪ್ರವಾಸ ಮಾಡುತ್ತೇನೆ.  ಇನ್ನು ಮುಂದೆ ರೇಣುಕಾಚಾರ್ಯ ನಿದ್ದೆ ಮಾಡದೇ 28 ಕ್ಷೇತ್ರದಲ್ಲಿಯೂ ಓಡಾಡಿ ಕೆಲಸ ಮಾಡುತ್ತೇನೆ. ಎಲ್ಲರೂ ಒಟ್ಟಾಗಿ ಒಂದಾಗಿ ಬಿಜೆಪಿ ಗೆಲ್ಲಿಸುವ ಪ್ರಯತ್ನ ಮಾಡುತ್ತೇವೆ'' ಎಂದು ಹೇಳಿದರು.

''ನಾನು ಕೂಡ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೆ. ಆದರೆ ಸಿಕ್ಕಿಲ್ಲ, ಹಾಗಂತ ನಾನೇನು ಬೇಜಾರು ಆಗಿಲ್ಲ. ಅಧಿಕಾರ ಮುಖ್ಯವಲ್ಲ, ಅಧಿಕಾರ ನೀರಿನ ಮೇಲೆ ಗುಳ್ಳೆಯ ರೀತಿ''  ಎಂದು ನುಡಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News