×
Ad

‘ಶಕ್ತಿ ಯೋಜನೆ’ಯಿಂದ ಬೊಕ್ಕಸಕ್ಕೆ ಮರಳಿ ಆದಾಯ: ಕಾಂಗ್ರೆಸ್

Update: 2023-07-21 19:31 IST

ಬೇಂಗಳೂರು, ಜು. 21: ‘ಭೂಮಿಗೆ ಎಸೆದ ಬೀಜ ಹೇಗೆ ವ್ಯರ್ಥವಾಗದೆ ಬೆಳೆದು ಫಲ ನೀಡುತ್ತದೆಯೋ ಹಾಗೆಯೇ ಜನರಿಗೆ ನೀಡುವ ಯೋಜನೆಗಳಿಂದ ಬೊಕ್ಕಸಕ್ಕೆ ಮರಳಿ ಆದಾಯ ತಂದುಕೊಡುತ್ತವೆ’ ಎಂದು ಕಾಂಗ್ರೆಸ್, ಸಾರಿಗೆ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ‘ಶಕ್ತಿ ಯೋಜನೆ’ ಕುರಿತು ವಿಶ್ಲೇಷಿಸಿದೆ.

ಶುಕ್ರವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಇದೇ ಆರ್ಥಿಕ ಚಲನಶೀಲತೆಯ ‘ಶಕ್ತಿ’. ಶಕ್ತಿ ಯೋಜನೆಯಿಂದ ಪ್ರವಾಸೋಧ್ಯಮಕ್ಕೆ ಉತ್ತೇಜನ ಸಿಕ್ಕಿದೆ, ಹಣದ ಹರಿವು ಹೆಚ್ಚಳವಾಗಿದೆ. ಐದು ಗ್ಯಾರಂಟಿ ಯೋಜನೆಗಳಿಗೆ ಹಣ ಎಲ್ಲಿಂದ ತರುತ್ತೀರಿ ಎಂದು ಪ್ರಶ್ನಿಸುವವರಿಗೆ ಈಗ ಉತ್ತರ ಸಿಕ್ಕಿರಬಹುದು. ಬುದ್ದಿವಂತರಾಗಿದ್ದರೆ ಮಾತ್ರ!’ ಎಂದು ಪ್ರತಿಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News