×
Ad

‘ಒಳಮೀಸಲಾತಿ’ ಸಮಗ್ರ ಸಮೀಕ್ಷೆ ಅವಧಿ ಜೂ.1ರ ವರೆಗೆ ವಿಸ್ತರಣೆ

Update: 2025-05-23 20:48 IST

ಸಾಂದರ್ಭಿಕ ಚಿತ್ರ | PC: Grok

ಬೆಂಗಳೂರು : ಒಳಮೀಸಲಾತಿ ಜಾರಿಗಾಗಿ ನ್ಯಾ.ಎಚ್.ಎನ್.ನಾಗಮೋಹನ್‍ದಾಸ್ ಏಕಸದಸ್ಯ ವಿಚಾರಣಾ ಆಯೋಗದ ನೇತೃತ್ವದಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025ರ ಅವಧಿಯನ್ನು ಜೂ.1ರ ವರೆಗೆ ವಿಸ್ತರಿಸಲಾಗಿದೆ.

ಮನೆ-ಮನೆ ಭೇಟಿ ನೀಡಿ ನಡೆಸಲಾಗುವ ಸಮೀಕ್ಷೆಯ ಅವಧಿಯನ್ನು ಮೇ.26ರಿಂದ 29ರವರೆಗೆ ವಿಸ್ತರಿಸಲಾಗಿದ್ದು, ವಿಶೇಷ ಶಿಬಿರ (ಸಮೀಕ್ಷಾ ಬ್ಲಾಕ್ ವ್ಯಾಪ್ತಿಯಲ್ಲಿ) 3 ದಿನಗಳ ಕಾಲ - ಮೇ 30ರಿಂದ ಜೂ.1ರವರೆಗೆ ಮರು ನಿಗದಿಪಡಿಸಲಾಗಿದೆ.

ಆನ್‍ಲೈನ್ ಮೂಲಕ ಸ್ವಯಂ ಘೋಷಣೆ ಜೂ.1ರ ವರೆಗೆ ಮುಂದುವರಿಯಲಿದೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News