×
Ad

ಬಿಜೆಪಿಯವರೇ ನನ್ನನ್ನು ಕಾಂಗ್ರೆಸ್‌ಗೆ ಕಳಿಸುವಂತಿದೆ...: ಶಾಸಕ ಎಸ್‌.ಟಿ ಸೋಮಶೇಖರ್‌ ಹೇಳಿದ್ದೇನು?

Update: 2023-08-17 13:57 IST

ಬೆಂಗಳೂರು: ʼʼಕಾಂಗ್ರೆಸ್‌ಗೆ ಸೇರ್ತಾರೆʼʼ ಎಂಬ ವದಂತಿಗೆ ಯಶವಂತಪುರ ಬಿಜೆಪಿ ಶಾಸಕ ಎಸ್‌.ಟಿ ಸೋಮಶೇಖರ್‌ ಇದೀಗ ಸ್ಪಷ್ಟನೆ ನೀಡಿದ್ದಾರೆ. ಸೋಮಶೇಖರ್‌ ಅವರನ್ನು ಭೇಟಿಯಾದ ಕಾಂಗ್ರೆಸ್‌ MLA

ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೋಮಶೇಖರ್‌, ʼʼಬಿಜೆಪಿಯವರೇ ನನ್ನನ್ನು ಕಾಂಗ್ರೆಸ್‌ಗೆ ಕಳಿಸುವಂತಿದೆ. ನಾನು ಕಾಂಗ್ರೆಸ್‌ಗೆ ಹೋಗುವ ಬಗ್ಗೆ ಎಲ್ಲೂ ಹೇಳಿಲ್ಲ, ನಮ್ಮ ಕಾರ್ಯಕರ್ತರ ಜತೆಗೂ ಹೇಳಿಕೊಂಡಿಲ್ಲ. ಬಿಜೆಪಿ ನಾಯಕರ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ಡಿಕೆಶಿ ಬಳಿ ರಾಜಕೀಯ ವಿಚಾರ ಮಾತನಾಡಿಲ್ಲʼʼ ಎಂದು ಹೇಳಿದರು. 

ʼʼಕೆಪಿಸಿಸಿ ಅಧ್ಯಕ್ಷರನ್ನು ಹೊಗಳಿದ್ದನ್ನೇ ಕೆಲ ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಶಲತಾಣಗಳಲ್ಲಿ ವೈರಲ್‌ ಮಾಡಿದ್ದಾರೆ. ಇಲ್ಲಿ ಸ್ಥಳೀಯ ಮೂಲ ಬಿಜೆಪಿಗರು ನನ್ನ ವಿರುದ್ಧ ಕೆಲಸ ಮಾಡಿದರು. ನನ್ನನ್ನು ಸೋಲಿಸಬೇಕು ಅಂತ  ಆಡಿಯೋ ಹರಿಬಿಟ್ಟಿದ್ದರು. ಬಿಜೆಪಿಯವರೇ ನನ್ನನ್ನು ಕಾಂಗ್ರೆಸ್ ಗೆ ಕಳಿಸುವಂತಿದೆʼʼ ಎಂದು ಹೇಳಿದರು. 

ʼʼನಳಿನ್‌ ಕುಮಾರ್‌ ಕಟೀಲ್, ಸಿಟಿ ರವಿ ಅವರು ಫೋನ್ ಮಾಡಿದ್ದರು. ಡಿವಿ ಸದಾನಂದಗೌಡ ಅವರು ಮನೆಗೆ ಕರೆಸಿ ಮಾತನಾಡಿದ್ದಾರೆ. ನಾನು ಬಿಜೆಪಿ ಬಿಟ್ಟು ಹೋಗುವುದಿಲ್ಲʼʼ ಎಂದು ಸ್ಪಷ್ಟಪಡಿಸಿದರು. 

ಕಾಂಗ್ರೆಸ್ ಶಾಸಕ ಭೇಟಿ 

ಕಾಂಗ್ರೆಸ್‌ ಸೇರ್ಪಡೆ ವದಂತಿ ನಡುವೆ ನೆಲಮಂಗಲ ಕಾಂಗ್ರೆಸ್ ಶಾಸಕ ಎನ್. ಶ್ರೀನಿವಾಸ್ ಮಾತುಕತೆ ನಡೆಸಲು ಸೋಮಶೇಖರ್​ ಕಚೇರಿಗೆ ಆಗಮಿಸಿದ್ದು, ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News