×
Ad

ಕಲಬುರಗಿ | ಬಾಲಕಿ ಅಪಹರಣಕ್ಕೆ ಯತ್ನ ಆರೋಪ: 8 ಜನರ ವಿರುದ್ಧ ಪ್ರಕರಣ ದಾಖಲು

Update: 2023-07-15 16:38 IST

ಕಲಬುರಗಿ: ಅಪ್ರಾಪ್ತ ಬಾಲಕಿಯನ್ನು ಅಪಹರಣಕ್ಕೆ ಯತ್ನಿಸಿದ ಆರೋಪದ ಮೇಲೆ 8 ಜನರ ವಿರುದ್ಧ ಇಲ್ಲಿನ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜು, ಶಿವಕುಮಾರ ಜಾಪೂರ, ಕೃಷ್ಣಾ ತೊನಸನಹಳ್ಳಿ, ಶ್ರೀಶೈಲ ತೊನಸನಹಳ್ಳಿ, ಶರಣಪ್ಪ ಪ್ರಕಾಶ ತೊನಸನಹಳ್ಳಿ, ಶ್ರೀನಾಥ ಮಲ್ಲಿಕಾರ್ಜುನ ತೊನಸನಹಳ್ಳಿ ಮತ್ತು ಜೈಭೀಮ ಪ್ರಕಾಶ ತೊನಸನಹಳ್ಳಿ ವಿರುದ್ಧ ಮಕ್ಕಳ ಮೇಲಿನ ದೌರ್ಜನ್ಯ, ಎಸ್.ಸಿ.ಎಸ್.ಟಿ ದೌರ್ಜನ್ಯ ತಡೆ ಕಾಯ್ದೆ, ಅಪಹರಣಕ್ಕೆ ಯತ್ನ ಮತ್ತು ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

ನಗರದ ಶಹಬಾದ ರಸ್ತೆಯ ಶಕ್ತಿ ನಗರದಲ್ಲಿರುವ ಸಂಬಂಧಿಕರ ಮನೆಗೆ ಹೋಗಿ ಬಾಲಕಿ ಮರಳಿ ಮನೆಯ ಕಡೆ ಬರುತ್ತಿದ್ದಾಗ 8 ಜನ ಆರೋಪಿಗಳು ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಉದ್ದೇಶದಿಂದ ಅಪಹರಣ ಮಾಡುವ ಕುರಿತು ಮಾತನಾಡುತ್ತಿದ್ದರು. ಇದೇ ವೇಳೆ ಅದೇ ಮಾರ್ಗವಾಗಿ ಬಾಲಕಿಯ ಸಂಬಂಧಿಯೊಬ್ಬರು ಬಂದಿದ್ದರಿಂದ ಅಲ್ಲಿಂದ ಓಡಿ ಹೋಗಿದ್ದಾರೆ ಎಂದು ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News