ಕಲಬುರಗಿ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಗೆ ಹಲ್ಲೆ
Update: 2023-11-19 09:14 IST
Photo: facebook
ಕಲಬುರಗಿ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮತ್ತು ಆತನ ಆಪ್ತ ಸ್ನೇಹಿತ ಶ್ರೀಕಾಂತ್ ಸುಲೇಗಾವ ಇಬ್ಬರ ಮೇಲೆ ಮಧ್ಯರಾತ್ರಿ ಕಿಡಿಗೇಡಿಗಳು ಬಿಯರ್ ಬಾಟಲ್ ಗಳಿಂದ ಹಲ್ಲೆ ನಡೆಸಿರುವ ಘಟನೆ ಚಿತ್ತಾಪುರ ತಾಲ್ಲೂಕಿನ ಮಾಲಗತಿ ಹೈವ್ ಶಂಕರವಾಡಿ ಕ್ರಾಸ್ ಹತ್ತಿರ ನಡೆದಿದೆ.
ಮಧ್ಯರಾತ್ರಿ ಮಣಿಕಂಠ ರಾಠೋಡ್ ಮತ್ತು ಶ್ರೀಕಾಂತ್ ಸುಲೇಗಾವ ಕಲಬುರಗಿಗೆ ಆಗಮಿಸುವ ವೇಳೆ ಕಿಡಿಗೇಡಿಗಳು ಬಿಯರ್ ಬಾಟಲ್ ಗಳಿಂದ ಹಲ್ಲೆ ನಡೆಸಿದ್ದು, ಮಣಿಕಂಠ ರಾಠೋಡ್ ಅವರಿಗೆ ಗಂಭೀರ ಗಾಯಗಳಾಗಿವೆ. ಶ್ರೀಕಾಂತ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಸ್ಥಳೀಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹಲ್ಲೆ ನಡೆಸಿದವರ ಗುರುತು ಮತ್ತು ಕಾರಣ ತಿಳಿದುಬಂದಿಲ್ಲ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.