ಕಲಬುರಗಿ: ತೃತೀಯ ಲಿಂಗಿಗಳಿಗೆ ಗುರುತಿನ ಚೀಟಿ ವಿತರಣೆ
Update: 2023-11-27 15:47 IST
ಕಲಬುರಗಿ,ನ.27: ಜಿಲ್ಲೆಯ ಸುಮಾರು 39 ತೃತೀಯ ಲಿಂಗಿಗಳಿಗೆ ಗುರುತಿನ ಚೀಟಿಯನ್ನು ಜಿಲ್ಲಾಧಿಕಾರಿ ಬಿ.ಪೌಝಿಯಾ ತರನ್ನುಮ್ ಅವರು ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ವಿತರಣೆ ಮಾಡಿದರು.
ಸರ್ಕಾರದಿಂದ ಮಾಸಾಶನ, ವಸತಿ, ನಿವೇಶನ ಸೇರಿದಂತೆ ಅನೇಕ ಯೋಜನೆಗಳ ಸೌಲಭ್ಯ ಪಡೆಯಲು ಗುರುತಿನ ಚೀಟಿಯ ಅವಶ್ಯಕತೆ ಮನಗಂಡು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸಾಂಕೇತಿಕವಾಗಿ 10 ಜನರಿಗೆ ಐ.ಡಿ. ಕಾರ್ಡ್ ವಿತರಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನವೀನ್.ಯು ಉಪಸ್ಥಿತರಿದ್ದರು.