×
Ad

ಕಲಬುರಗಿ: ವಕೀಲನ ಬರ್ಬರ ಹತ್ಯೆ

Update: 2023-12-07 14:23 IST

ಕಲಬುರಗಿ: ವಕೀಲರೊಬ್ಬರನ್ನು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ ಘಟನೆ ನಗರದ ಸಾಯಿ ಮಂದಿರ ಸಮೀಪದ ಅಪಾರ್ಟ್ಮೆಂಟ್ ಬಳಿ ಗುರುವಾರ ನಡೆದಿದೆ.

ಹತ್ಯೆಗೀಡಾದ ವಕೀಲನನ್ನು ಈರಣ್ಣಗೌಡ ಪಾಟೀಲ (40) ಎಂದು ಗುರುತಿಸಲಾಗಿದೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸಂಬಂಧಿಕರೇ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ವಕೀಲನನ್ನು ಬೆನ್ನಟ್ಟುತ್ತಿರುವ ದೃಶ್ಯ  ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್‌ ಆಗಿದೆ.

ನ್ಯಾಯಾಲಯಕ್ಕೆ ತೆರಳುತ್ತಿದ್ದ ವೇಳೆ ಆರೋಪಿಗಳು ಸಮಯ ಸಾಧಿಸಿ ಕಲ್ಲು ಎತ್ತಿ ಹಾಕಿ  ಹತ್ಯೆಗೈದಿದ್ದಾರೆ ಎನ್ನಲಾಗುತ್ತಿದೆ.

ಸ್ಥಳಕ್ಕೆ ವಿಶ್ವವಿದ್ಯಾಲಯ ಠಾಣೆ ಪೊಲೀಸರ ಭೇಟಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News