ಕಲಬುರಗಿ | ಭಗತ್ ಸಿಂಗ್ ಜನ್ಮ ದಿನಾಚರಣೆ ಮೆರವಣಿಗೆಯಲ್ಲಿ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯ ಫೋಟೊ!
Update: 2023-09-28 12:44 IST
ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ಮಂದೇವಾಲ ಗ್ರಾಮದಲ್ಲಿ ಭಗತ್ ಸಿಂಗ್ ಜನ್ಮದಿನದ ಪ್ರಯುಕ್ತ ಇಂದು (ಸೆ.28) ನಡೆದ ಮೆರವಣಿಗೆಯಲ್ಲಿ ಗಾಂಧೀಜಿ ಹಂತಕ ನಾಥೂರಾಮ್ ಗೋಡ್ಸೆಯ ಫೋಟೊ ಇರುವ ಫ್ಲೆಕ್ಸ್ ಹಿಡಿದು ಮೆರವಣಿಗೆ ಮಾಡಲಾಗಿದೆ.
ವೈಜೂ ಸಾಹುಕಾರ ಮುರಗಾನೂರ ಇವರ ಮುಂದಾಳತ್ವದಲ್ಲಿ ನಡೆದ ಮೆರವಣಿಗೆಯಲ್ಲಿ, ಭಗತ್ ಸಿಂಗ್, ರಾಣಿ ಚೆನ್ನಮ್ಮ, ಸರ್ದಾರ್ ವಲ್ಲಭಭಾಯಿ ಪಟೇಲ್ ಮುಂತಾದ ರಾಷ್ಟ್ರ ನಾಯಕರ ಫೋಟೊ ಜೊತೆಗೆ ಸಾವರ್ಕರ್ ಮತ್ತು ಗಾಂಧಿ ಹಂತಕ ಗೋಡ್ಸೆಯ ಫೋಟೋಗಳಿರುವ ಫ್ಲೆಕ್ಸ್ ಗಳನ್ನು ಹಿಡಿದು ಮೆರವಣಿಗೆ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಗೋಡ್ಸೆ ಚಿತ್ರವಿರುವ ಈ ಫ್ಲೆಕ್ಸ್ ಫೋಟೊ ಹರಿದಾಡುತ್ತಿದ್ದು, ''ಈ ಕಾರ್ಯಕ್ರಮಕ್ಕೆ ಯಾವುದೇ ಅನುಮತಿಯನ್ನು ಪಡೆದಿಲ್ಲ '' ಎಂದು ನೆಲೋಗಿ ಠಾಣೆಯ ಪೊಲೀಸರು ಮಾಹಿತಿ ನೀಡಿದರು.