×
Ad

ಕಲಬುರಗಿ | ಬಾಲಕಿಯ ಅತ್ಯಾಚಾರ, ಕೊಲೆ; ಬಾವಿಯಲ್ಲಿ ಮೃತದೇಹ ಪತ್ತೆ

Update: 2023-07-18 16:05 IST

ಕಲಬುರಗಿ: ಆಳಂದ ತಾಲೂಕಿನ ಗ್ರಾಮವೊಂದರಲ್ಲಿ ಬಾಲಕಿ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಲಾಗಿದೆ ಎಂದು ಆಕೆಯ ತಂದೆ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ನೀಡಿದ್ದಾರೆ.

11 ವರ್ಷದ ಬಾಲಕಿಯ ಶವ ಗ್ರಾಮವೊಂದರ ಬಾವಿಯಲ್ಲಿ ಸಿಕ್ಕಿದ್ದು, ಅತ್ಯಾಚಾರ, ಕೊಲೆ ಶಂಕೆ ಮೇಲೆ ಅದೇ ಗ್ರಾಮದ ವ್ಯಕ್ತಿಯೊಬ್ಬನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಆ ವ್ಯಕ್ತಿಯು ಹಿಂದೆಯೂ ಇಂತಹ ಕೃತ್ಯದಲ್ಲಿ ಭಾಗಿಯಾಗಿ, ಜೈಲು ಶಿಕ್ಷೆಗೂ ಗುರಿಯಾಗಿದ್ದ ಎನ್ನಲಾಗುತ್ತಿದೆ.

ಶನಿವಾರ ಶಾಲೆ ಮುಗಿಸಿಕೊಂಡು ಪಕ್ಕದ ಗ್ರಾಮದ ಚಿಕ್ಕಮ್ಮನ ಮನೆಗೆ ತೆರಳುವುದಾಗಿ ಹೇಳಿ ಹೋದ ಬಾಲಕಿ ಮನೆಗೆ ವಾಪಸ್ ಬಂದಿರಲಿಲ್ಲ. ರವಿವಾರ ತಡರಾತ್ರಿ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ ಎಂದು ಗ್ರಾಮಸ್ಥರೊಬ್ಬರು ಹೇಳಿದ್ದಾರೆ.

ರವಿವಾರ ಸಂಜೆ ಗ್ರಾಮದ ಹೊರವಲಯದ ಬಾವಿಯೊಂದರಲ್ಲಿ ನೀರು ಬಿಡಲು ಹೋಗಿದ್ದ ವ್ಯಕ್ತಿ ಶವವನ್ನು ನೋಡಿ ಠಾಣೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಶವವನ್ನು ಹೊರ ತೆಗೆದರು. ಆದರೆ, ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹದ ಗುರುತು ಪತ್ತೆಯಾಗಿರಲಿಲ್ಲ. ಕೊನೆಗೆ ಬಾಲಕಿಯ ಸಹೋದರ ಆಕೆ ಧರಿಸಿದ್ದ ಟೀ ಶರ್ಟ್ ಗುರುತು ಹಿಡಿದಿದ್ದಾನೆ ಎಂದು ಹೇಳಲಾಗಿದೆ.

ಘಟನೆ ಖಂಡಿಸಿ ಪ್ರತಿಭಟನೆ, ಸ್ಥಳಕ್ಕೆ ಡಿಸಿ ಭೇಟಿ

ಘಟನೆ ಖಂಡಿಸಿ ಬಾಲಕಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದಾರೆ. 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News