×
Ad

ಕೆಇಎ : ಮೊರಾರ್ಜಿ, ಏಕಲವ್ಯ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ

Update: 2024-04-02 18:20 IST

ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯ ಮೊರಾರ್ಜಿ, ಕಿತ್ತೂರು ರಾಣೆ ಚೆನ್ನಮ್ಮ ಸೇರಿದಂತೆ ಇತರ ವಸತಿ ಶಾಲೆಗಳ 6ನೆ ತರಗತಿಗೆ ಪ್ರವೇಶ ಕಲ್ಪಿಸುವ ಸಲುವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಲಿಖಿತ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ.

ಪರೀಕ್ಷೆ ತೆಗೆದುಕೊಂಡಿದ್ದ 1,98,672 ವಿದ್ಯಾರ್ಥಿಗಳ ಜಿಲ್ಲಾವಾರು ರ್ಯಾಂಕ್ ಪಟ್ಟಿಯನ್ನು ವೆಬ್‍ಸೈಟ್ https://cetonline.karnataka.gov.in/kea/indexnew ನಲ್ಲಿ ಪ್ರಕಟಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಸೀಟ್ ಮೆಟ್ರಿಕ್ಸ್ ವಿವರಗಳನ್ನು ಸಲ್ಲಿಸಿದ ನಂತರ ವಸತಿ ಶಾಲೆವಾರು ಸೀಟು ಹಂಚಿಕೆ ಪ್ರಕ್ರಿಯೆಯನ್ನು ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News