×
Ad

ಇರುವೆಯನ್ನು ಆನೆ ಎಂದು ನಂಬಿಸಲು ಹೊರಟಿದ್ದ ಬಿಜೆಪಿ ನಾಯಕರ ಕನಸಿಗೆ ತಣ್ಣೀರು ಎರಚಿದ ಖುಷ್ಬೂ: ಕಾಂಗ್ರೆಸ್

Update: 2023-07-27 14:59 IST

ಬೆಂಗಳೂರು: ''ಇರುವೆಯನ್ನು ಆನೆ ಎಂದು ನಂಬಿಸಲು ಹೊರಟಿದ್ದ ರಾಜ್ಯ ಬಿಜೆಪಿ ನಾಯಕರು ಹಾಗೂ ಬಿಜೆಪಿಯ ಟೂಲ್ ಕಿಟ್ ಗ್ಯಾಂಗಿನ ಕನಸಿಗೆ ಮತ್ತೊಮ್ಮೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಹಾಗೂ ಬಿಜೆಪಿ ನಾಯಕಿ ಖುಷ್ಬು ತಣ್ಣೀರು ಎರಚಿದ್ದಾರೆ'' ಎಂದು ಕಾಂಗ್ರೆಸ್ ಟೀಕಿಸಿದೆ. 

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ''ಉಡುಪಿ ಕಾಲೇಜಿನ ಘಟನೆಯು ಷಡ್ಯಂತ್ರವಲ್ಲ, ವಿದ್ಯಾರ್ಥಿನೀಯರ ಮೊಬೈಲ್ ಗಳಲ್ಲಿ ಯಾವುದೇ ವಿಡಿಯೋಗಳು ಪತ್ತೆಯಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನಕಲಿ ವಿಡಿಯೋ ಹರಿಬಿಡಲಾಗಿದೆ. ಪೊಲೀಸರು ಸಮರ್ಪಕ ತನಿಖೆ ನಡೆಸಿದ್ದಾರೆ, ಸುಳ್ಳು ಸುದ್ದಿ ಹಬ್ಬಿಸುವುದನ್ನು ಬಿಡಬೇಕು'' ಎಂದು ಬಿಜೆಪಿ ನಾಯಕರನ್ನು ಒತ್ತಾಯಿಸಿದೆ. 

''ಇದನ್ನು ಕೇವಲ ಹುಡುಗಾಟಿಕೆಯ ಘಟನೆಯಾಗಿಯಷ್ಟೇ ನೋಡಬೇಕು ಹೊರತು ರಾಜಕೀಯಕ್ಕೆ ಬಳಸಬಾರದು ಎಂಬ ಸ್ವತಃ ಬಿಜೆಪಿ ನಾಯಕಿಯ ಸಂದೇಶವನ್ನು ಬಿಜೆಪಿಗರು ಅರಗಿಸಿಕೊಳ್ಳಲು ಸಾಧ್ಯವೇ?, ಸರ್ಕಾರವನ್ನು ವಿರೋಧಿಸಲು ವಿಷಯಗಳಿಲ್ಲದೆ ಕಂಗಲಾಗಿರುವ ಬಿಜೆಪಿ ಈಗ ಬಾತ್ ರೂಮಿನ ರಾಜಕೀಯಕ್ಕೆ ಹೊರಟಿದೆ'' ಎಂದು ಕಾಂಗ್ರೆಸ್ ಕಿಡಿಕಾರಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News