×
Ad

ಕೋಲಾರ | ಕಾಲೇಜು ಬ್ಯಾಗ್‌ನಲ್ಲಿಟ್ಟು ಜಿಲ್ಲಾಸ್ಪತ್ರೆಯಿಂದ ಗಂಡು ಶಿಶು ಅಪಹರಣ; ಪ್ರಕರಣ ದಾಖಲು

Update: 2023-10-26 23:22 IST

ಕೋಲಾರ: ನಗರದ ಎಸ್ ಎನ್ ಆರ್ ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಘಟಕದಲ್ಲಿ 6 ದಿನದ ಗಂಡು ಶಿಶುವನ್ನು ಮೂವರು ಮಹಿಳೆಯರು ಅಪಹರಿಸಿರುವ ಘಟನೆ ಗುರುವಾರ ಸಂಜೆ ವರದಿಯಾಗಿದೆ. 

ಈ ಘಟನೆ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ. 

ಅಪಹರಣಕ್ಕೊಳಗಾಗಿರುವ ಮಗು ಮಾಲೂರು ಪಟ್ಟಣದ ಪಟೇಲರ ಬೀದಿ ಮೂಲದ ಪೂವರಸನ್ ನಂದಿನಿ ದಂಪತಿಯದ್ದು ಎಂದು ತಿಳಿದು ಬಂದಿದೆ. 

ಮೂವರು ಮಹಿಳೆಯರು ಮಗುವನ್ನು ಕಾಲೇಜು ಬ್ಯಾಗಿನಲ್ಲಿ ಇರಿಸಿಕೊಂಡು ಕಳ್ಳತನ ಮಾಡಿ ಪರಾರಿಯಾಗಿರುವುದು ಗೊತ್ತಾಗಿದೆ. ಹೊರಗೆ ಬಂದು ಆಟೋ ಹತ್ತುತ್ತಿರುವ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಾರ್ಡ್‌ನಲ್ಲಿ ತಾಯಿ ನಿದ್ದೆ ಹೋಗಿದ್ದ ಸಂದರ್ಭದಲ್ಲಿ ಹೊಂಚು ಹಾಕಿ ಮಗುವನ್ನು ಕದ್ದೊಯ್ದಿದಿದ್ದಾರೆ ಎಂದು ಹೇಳಲಾಗಿದೆ. 

ಕೋಲಾರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಕೂಡಲೇ ಕ್ರಮ ಕೈಗೊಂಡು ಮಗುವನ್ನು ಕೊಡಿಸುವಂತೆ ನಂದಿನಿ ಮತ್ತು ಕುಟುಂಬಸ್ಥರು ಮನವಿ ಮಾಡಿದ್ದಾರೆ. 

 ನಗರ ಠಾಣೆ ಪೊಲೀಸರು ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News