×
Ad

ಕೋಲಾರ | ಬಾಲಕನ ಕೊಲೆ ಪ್ರಕರಣ; ಆರೋಪಿ ಕಾಲಿಗೆ‌ ಪೊಲೀಸರಿಂದ ಗುಂಡೇಟು

Update: 2023-11-10 11:33 IST

ಕಾರ್ತಿಕ್‌ ಸಿಂಗ್‌ - ಮೃತ ಬಾಲಕ

ಕೋಲಾರ, ನ.9: ನಗರದಲ್ಲಿ ನ.3ರಂದು ನಡೆದಿದ್ದ ಕಾರ್ತಿಕ್  ಸಿಂಗ್ (17) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆದಿದ್ದಾರೆಂದು ಕೇಂದ್ರ ವಲಯ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಿಗಳನ್ನು ಬಂಧನದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದಾಗ ಇಬ್ಬರು ಬಾಲಕರ ಕಾಲುಗಳಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ. ಗಾಯಗೊಂಡಿರುವ ಆರೋಪಿಗಳನ್ನು ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದರು.

ಪ್ರಕರಣದಲ್ಲಿ ಸೋನು ಆಲಿಯಾಸ್ ಶ್ರೀನಿವಾಸ್‌, ಉದಯಕುಮಾರ್, ಪ್ರಶಾಂತ್, ಯಶವಂತ್ ಆಲಿಯಾಸ್ ಭೀಮ್ ಸೇರಿದಂತೆ ಒಟ್ಟು ಏಳು ಆರೋಪಿಗಳನ್ನು ಬಂಧಿಸಿದ್ದು, ಓರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ನಾಲ್ವರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು ಸೇರಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ >>> ಕೋಲಾರ: ಶಾಲಾ ಆವರಣದಲ್ಲಿ ಬಾಲಕನ ಹತ್ಯೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News