×
Ad

ಕೋಲಾರ: ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ತಂದೆ, ಮಗನ ಮೃತದೇಹ ಪತ್ತೆ

Update: 2023-09-14 14:03 IST

ಕೋಲಾರ, ಸೆ.14: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಎಂ.ವಿ. ನಗರದಲ್ಲಿರುವ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ತಂದೆ ಮಗನ ಮೃತದೇಹ ಪತ್ತೆಯಾಗಿರುವುದು ಗುರುವಾರ ವರದಿಯಾಗಿದೆ. 

ತಂದೆ ವಸಂತರಾಜುಲು (84) ಹಾಗೂ ಮಗ ಸೂರ್ಯ ಪ್ರಕಾಶ್ (44) ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

ವಯಸ್ಸಾಗಿದ್ದ ತಂದೆಯನ್ನ ಪೋಷಣೆ ಮಾಡುತ್ತಿದ್ದ ಮಗ ಸೂರ್ಯ ಪ್ರಕಾಶ್, ಕಳೆದ ಮೂರು ದಿನಗಳ ಹಿಂದೆ ಮಗ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಮಗ ಮೃತಪಟ್ಟ ನೋವಿನಲ್ಲಿ ತಂದೆಯೂ ಸಹ ಸಾವನ್ನಪ್ಪಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

ಸ್ಥಳಕ್ಕೆ ಕೆಜಿಎಫ್ ಎಸ್ಪಿ ಶಾಂತಕುಮಾರ್, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನಿಡಿ ಪರಿಶೀಲನೆ ನಡೆಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News