×
Ad

ಕೊಪ್ಪಳ: ಗಣೇಶ ಮೆರವಣಿಗೆ ವೇಳೆ ಕುಸಿದು ಬಿದ್ದು ಯುವಕ ಮೃತ್ಯು

Update: 2023-10-10 10:54 IST

ಕೊಪ್ಪಳ: ನಗರದ ಪ್ರಶಾಂತ ನಗರ ಬಡಾವಣೆ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಯುವಕನೊಬ್ಬ ಕುಣಿಯುವಾಗಲೇ ಪ್ರಜ್ಞೆ ತಪ್ಪಿ ನೆಲಕ್ಕುರುಳಿ ಮೃತಪಟ್ಟಿರುವುದು ಸೋಮವಾರ ರಾತ್ರಿ ವರದಿಯಾಗಿದೆ. 

ಮೃತ ಯುವಕನನ್ನು ನಗರದ ನಿವಾಸಿ ಸುದೀಪ್ ಸಜ್ಜನ್‌ (30) ಎಂದು ಗುರುತಿಸಲಾಗಿದೆ.

ʼಬಡಾವಣೆಯ 21ನೇ ದಿನದ ಗಣೇಶ ಮೂರ್ತಿ ವಿಸರ್ಜನೆಗೆ ಗಣೇಶ ಪ್ರತಿಷ್ಠಾಪನಾ ಮಂಡಳಿಯವರು ಮಹಾರಾಷ್ಟ್ರದ ಪುಣೆಯಿಂದ ಡಿಜೆ ತರಿಸಿದ್ದರು. ಕುಣಿಯುವಾಗ ಸುದೀಪ್ ಏಕಾಏಕಿ ನೆಲಕ್ಕೆ ಕುಸಿದು ಬಿದ್ದಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆʼ ಎಂದು ಪೊಲೀಸರು ತಿಳಿಸಿದ್ದಾರೆ.

ಹೃದಯಾಘಾತದಿಂದ ಯುವಕ ಸಾವನಪ್ಪಿರುವುದಾಗಿ ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News