×
Ad

ಹಿಟ್ ಆ್ಯಂಡ್ ರನ್ ಗೆ ಕೆ.ಎಸ್. ಆರ್.ಟಿ.ಸಿ ಬಸ್ ಪ್ರಯಾಣಿಕ ಬಲಿ

Update: 2023-07-23 15:34 IST

ಚಾಮರಾಜನಗರ: ಹಿಟ್ ಅಂಡ್ ರನ್ ಗೆ ಕೆ.ಎಸ್. ಆರ್.ಟಿ.ಸಿ ಬಸ್ ಪ್ರಯಾಣಿಕ ಬಲಿಹಿಟ್ ಅಂಡ್ ರನ್ ಗೆ ಕೆ.ಎಸ್. ಆರ್.ಟಿ.ಸಿ ಬಸ್ ಪ್ರಯಾಣಿಕ ಬಲಿಯಾಗಿರುವ ಘಟನೆ  ಹನೂರು ತಾಲ್ಲೂಕಿನ ಕೌದಳ್ಳಿ ಗ್ರಾಮದ ಬಳಿ ನಡೆದಿರುವ ಬಗ್ಗೆ ವರದಿಯಾಗಿದೆ.

ಮೃತ ವ್ಯಕ್ತಿಯನ್ನು ಬೆಂಗಳೂರಿನ ಮಾಗಡಿಯ ನಿವಾಸಿ ಯಶ್ವಂತ್ ಎಂದು ಗುರುತಿಸಲಾಗಿದೆ. ಕೌದಳ್ಳಿ ಗ್ರಾಮದ ಬಳಿ ಕೆ.ಎಸ್. ಆರ್ ಟಿ.ಸಿ ಬಸ್ ಪಂಚರ್ ಆಗಿದ್ದು , ಡ್ರೈವರ್ ಮತ್ತು ಕಂಡಕ್ಟರ್ ವೀಲ್ ಬದಲಾಯಿಸುವಾಗ ಪ್ರಯಾಣಿಕ ಯಶ್ವಂತ್ ಬೆಳಕಿನ ವ್ಯವಸ್ಥೆಗಾಗಿ ಬ್ಯಾಟರಿ ಹಿಡಿದಿರುವಾಗ ಅತೀ ವೇಗವಾಗಿ ಬಂದ ಅಪರಿಚಿತ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಯಶ್ವಂತ್ ಗೆ ತೀವ್ರ ಪೆಟ್ಟಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 ಯಶ್ವಂತ್ ನಿಧನಕ್ಕೆ ಕಂಬನಿ ಮಿಡಿದಿರುವ ಕೆ.ಎಸ್ ಆರ್ ಟಿ ಸಿ ಅಧಿಕಾರಿಗಳು, ಮೂರು ಲಕ್ಷರೂ ವಿಮಾ ಹಣವನ್ನು ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದು, ತುರ್ತಾಗಿ 25 ಸಾವಿರ ರೂ ಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಪ್ರಯಾಣಿಕ ಸಾವಿಗೆ ಕಾರಣವಾದ ಕಾರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News