×
Ad

ಕುಶಾಲನಗರ: ಕಸ ಸಂಗ್ರಹ ವಾಹನದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ

Update: 2023-08-25 20:35 IST

ಸಾಂದರ್ಭಿಕ  ಚಿತ್ರ

ಕುಶಾಲನಗರ, ಆ25: ಕಸ ಸಂಗ್ರಹ ವಾಹನದಲ್ಲಿ ನವಜಾತ ಹೆಣ್ಣು ಶಿಶುವಿನ ಮೃತದೇಹ ಪತ್ತೆಯಾದ ಘಟನೆ ಕುಶಾಲನಗರದಲ್ಲಿ ಶುಕ್ರವಾರ ವರದಿಯಾಗಿದೆ.

ಕುಶಾಲನಗರ ಪುರಸಭೆಯ ಕಸ ಸಂಗ್ರಹ ಆಟೊ ಟಿಪ್ಪರ್‌ನಲ್ಲಿ ಪ್ಲಾಸ್ಟಿಕ್ ನಿಂದ ಸುತ್ತಿದ್ದ ಮೃತದೇಹ ಕಂಡುಬಂದಿದೆ. ಬೆಳಗ್ಗೆ 6.30 ಗಂಟೆಗೆ ಕಸ ಸಂಗ್ರಹ ಕಾರ್ಯ ಆರಂಭಿಸಿದ ಆಟೋ ಟಿಪ್ಪರ್, ಕುಶಾಲನಗರದ ಬೈಚನಹಳ್ಳಿ ವ್ಯಾಪ್ತಿಯ ಯೋಗಾನಂದ, ಭವಾನಿ, ಕಾವೇರಿ, ಅಂಬೇಡ್ಕರ್ ಬಡಾವಣೆಯಲ್ಲಿ ಕಸ ಸಂಗ್ರಹಿಸಿದ್ದಾರೆ. ಹಳೆ ಮಾರುಕಟ್ಟೆಯಲ್ಲಿರುವ ಗೊಬ್ಬರ ತಯಾರಿಕೆ ಘಟಕದಲ್ಲಿ ಕಸ ವಿಲೇವಾರಿ ಸಂದರ್ಭ ಘಟನೆ ಬೆಳಕಿಗೆ ಬಂದಿದೆ.

ಹುಟ್ಟಿ ಒಂದು ದಿನವಾದ ಮಗು ಮೃತಪಟ್ಟಿದ್ದು, ದೇಹದಲ್ಲಿ ಯಾವುದೇ ಗಾಯದ ಕಲೆ ಕಂಡುಬಂದಿಲ್ಲ. ಕೂಡಲೆ ಕುಶಾಲನಗರ ಪೊಲೀಸ್ ಠಾಣೆಗೆ ಪುರಸಭೆ ಆರೋಗ್ಯ ನಿರೀಕ್ಷಕ ದೂರು ನೀಡಿದ್ದು, ಮಗುವಿನ ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News