ʼಧರ್ಮಸ್ಥಳ ಪ್ರಕರಣʼದಲ್ಲಿ ಶೀಘ್ರವೇ ಸತ್ಯಾಸತ್ಯತೆ ಹೊರಬರಲಿದೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Update: 2025-08-19 15:46 IST
ಬೆಂಗಳೂರು : ಧರ್ಮಸ್ಥಳದ ಹೆಸರಿಗೆ ಕಳಂಕ ಬರಬಾರದು ಎಂಬ ಕಾರಣಕ್ಕೆ ಸರಕಾರ ಎಸ್‌ಐಟಿ ರಚನೆ ಮಾಡಿದೆ. ಈ ಕುರಿತು ಶೀಘ್ರವೇ ಸತ್ಯಾಸತ್ಯತೆ ತಿಳಿಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಗೃಹ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ಅದಷ್ಟು ಬೇಗ ಸತ್ಯ ಹೊರಬೀಳಲಿದೆ ಎಂದರು.
ಸೌಹಾರ್ದಯುತ ಸಭೆ :
ನಿನ್ನೆ ಶ್ರಾವಣ ಸೋಮವಾರ ಆದ ಕಾರಣ ಎಲ್ಲಾ ವೀರಶೈವ-ಲಿಂಗಾಯತ ಸಮುದಾಯದ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು ಪೂಜೆಯಲ್ಲಿ ಪಾಲ್ಗೊಂಡು ಊಟಕ್ಕೆ ಸೇರಿದ್ದೆವು. ಇದೊಂದು ಸೌಹಾರ್ದಯುತ ಸಭೆ ಆಗಿತ್ತು. ಕೇವಲ ಜಾತಿಗಣತಿ ವಿಷಯ ಅಲ್ಲ, ನಮ್ಮ ಸಮಾಜದ ಅಭಿವೃದ್ಧಿ ಬಗ್ಗೆಯೂ ಚರ್ಚೆ ನಡೆಸಲಾಯಿತು ಎಂದು ತಿಳಿಸಿದರು.