×
Ad

ಡಿ.13ರಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ

Update: 2023-12-11 12:30 IST

ಬೆಳಗಾವಿ : ಸದನದಲ್ಲಿ ವಿರೋಧ ಪಕ್ಷಗಳ ಆರೋಪಕ್ಕೆ ತಕ್ಕ ಪ್ರತ್ಯುತ್ತರ, ಕ್ಷೇತ್ರದ ಅಭಿವೃದ್ಧಿಗೆ ಸೂಕ್ತ ರೀತಿಯಲ್ಲಿ ಹಣ ಬಿಡುಗಡೆಯಾಗದೇ ಇರುದರಿಂದ ಶಾಸಕರ ಅಸಮಾಧಾನ ಸೇರಿದಂತೆ ಹಲವಾರು ವಿಚಾರಗಳ ಕುರಿತು ಮಹತ್ವದ ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಶಾಸಕಾಂಗ  ಸಭೆಯನ್ನು ಡಿ.13ರಂದು ಕರೆದಿದ್ದಾರೆ.

ಬೆಳಗಾವಿಯ ಶಿವಾಜಿನಗರ ಮೈದಾನದ ಬಳಿ ಇರುವ ಬೆಳಗುಂಡಿಯ  ಶೂನ್ಯ ಫಾರ್ಮ್ ರಿಟ್ರೀಟ್ ನಲ್ಲಿ ಸಭೆ ನಡೆಯಲಿದ್ದು,ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ವಿಧಾನಸಭಾ ಅಧಿವೇಶನದ ಕುರಿತು ಸಮಗ್ರವಾಗಿ ಚರ್ಚೆಯಾಗಲಿದೆ.

ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಅನ್ನು ಯಾವ ರೀತಿಯಲ್ಲಿ ಸದನದಲ್ಲಿ ಎದುರಿಸಬೇಕು, ಹಾಗೆಯೇ ಸರ್ಕಾರದ ಮೇಲಿನ ಪ್ರತಿಪಕ್ಷದ ಆರೋಪಗಳನ್ನು ಒಮ್ಮತದಿಂದ ಎದುರಿಸುವ ಕುರಿತು ಸಮಗ್ರ ಚರ್ಚೆಯಾಗುವ ಸಂಭವವಿದೆ.

ಶಾಸಕಾಂಗ ಪಕ್ಷದ ಸಭೆಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್, ಸಚಿವರು ಮತ್ತು ಎಲ್ಲಾ ಶಾಸಕರು ಪಾಲ್ಗೊಳ್ಳಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News