×
Ad

ಸಿದ್ದರಾಮಯ್ಯ ಅವರ ಭಾವಚಿತ್ರದ ಮೇಲೆ ಬರದ ಗೆರೆಗಳು...!: ಟ್ವೀಟ್‌ ಮೂಲಕ ಸಿಎಂ ಕಾಲೆಳೆದ ಬಿಜೆಪಿ

Update: 2023-09-13 20:26 IST

ಕರ್ನಾಟಕ ಬಿಜೆಪಿ ಟ್ವಿಟರ್‌ ನಲ್ಲಿ ಹಂಚಿಕೊಂಡಿರುವ ಚಿತ್ರ

ಬೆಂಗಳೂರು: ಬರ ಪೀಡಿತ ಜಿಲ್ಲೆಗಳ ಘೋಷಣೆ ಹಾಗೂ ಪರಿಹಾರ ನೀಡಿಕೆ ವಿಳಂಬ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ಬುಧವಾರ @BJP4Karnatakaಎಕ್ಸ್‌ ನಲ್ಲಿ ( ಟ್ವಿಟರ್)‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರದ ಮೇಲೆ ಬರದ ಗೆರೆಗಳನ್ನು ಮೂಡಿಸಿದೆ. ಅದರಲ್ಲಿ ʼʼಬರ ಗ್ಯಾರಂಟಿ ಸಿಎಂʼʼ ಎಂದು ಬರೆದಿದ್ದು, ಈ ಮೂಲಕ ಬಿಜೆಪಿಯು ಸಿದ್ದರಾಮಯ್ಯ ಅವರ ಕಾಲೆಳೆದಿದೆ. 

ಸಿಎಂ ಭಾವಚಿತ್ರದ ಪೋಸ್ಟ್‌ ನಲ್ಲಿ ''ಕಾಂಗ್ರೆಸ್‌ ಬಂದಿದೆ-ಬರಗಾಲ ತಂದಿದೆ. ರಾಜ್ಯದಲ್ಲಿ ಬರ ಆವರಿಸಿದೆ- ಹನಿ ನೀರಿಗೂ ಹಾಹಾಕಾರ ಶುರುವಾಗಿದೆ'' ಎಂದು ಬಿಜೆಪಿಯು ಉಲ್ಲೇಖಿಸಿದೆ. 

ʼʼಕಾವೇರಿ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ತಮಿಳು ನಾಡಿಗೆ ನೀರು ಬಿಡಬಾರದು. ರಾಜ್ಯದ ವಸ್ತು ಸ್ಥಿತಿಯನ್ನು ಸುಪ್ರೀಂ ಕೋರ್ಟ್ ಮತ್ತು ಸಿಡಬ್ಲುಎಂಎಗೆ ರಾಜ್ಯ ಸರ್ಕಾರ ಮನವರಿಕೆ ಮಾಡಿಕೊಡಬೇಕುʼʼ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News