ಲೋಕಸಭಾ ಚುನಾವಣೆ : ರಾಜ್ಯದಲ್ಲಿ ಸಂಜೆ 5 ಗಂಟೆ ವೇಳೆಗೆ 66.05 ಶೇ. ಮತದಾನ

Update: 2024-05-07 12:17 GMT

ಬೆಂಗಳೂರು : ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ 2ನೇ ಹಂತದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಸಂಜೆ 5 ಗಂಟೆಯ ವೇಳೆ ಶೇ 66.05ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಪ್ರಕಟನೆ ತಿಳಿಸಿದೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ 5 ಗಂಟೆ ವೇಳೆಗೆ 72.75ಶೇ ಮತದಾನವಾಗಿದೆ. ಅದೇರೀತಿ, ಬೆಳಗಾವಿಯಲ್ಲಿ65.67 ಶೇ., ಬಾಗಲಕೋಟೆಯಲ್ಲಿ65.55 ಶೇ., ವಿಜಯಪುರದಲ್ಲಿ60.95 ಶೇ., ಕಲಬುರಗಿಯಲ್ಲಿ 57.20 ಶೇ., ರಾಯಚೂರಿನಲ್ಲಿ 59.48 ಶೇ., ಬೀದರ್ ನಲ್ಲಿ 60.17 ಶೇ., ಕೊಪ್ಪಳದಲ್ಲಿ 66.05 ಶೇ., ಬಳ್ಳಾರಿಯಲ್ಲಿ 68.94 ಶೇ., ಹಾವೇರಿಯಲ್ಲಿ 71.90 ಶೇ., ಧಾರವಾಡದಲ್ಲಿ 67.15 ಶೇ., ಉತ್ತರ ಕನ್ನಡದಲ್ಲಿ 69.57 ಶೇ., ದಾವಣಗೆರೆಯಲ್ಲಿ 70.90 ಶೇ. ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 72.07 ಶೇ. ಮತದಾನವಾಗಿದೆ ಎಂದು ಚುನಾವಣಾ ಆಯೋಗ ಪ್ರಕಟನೆಯ ಮೂಲಕ ಮಾಹಿತಿ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News