×
Ad

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ; ರಾಜ್ಯಾದ್ಯಂತ ಹಲವೆಡೆ ಲೋಕಾಯುಕ್ತ ದಾಳಿ

Update: 2024-01-31 08:53 IST

ಬೆಂಗಳೂರು: ತುಮಕೂರು, ಮಂಡ್ಯ, ಬೆಂಗಳೂರು ಸಹಿತ ರಾಜ್ಯದ 40 ಕಡೆ ಬುಧವಾರ ಬೆಳ್ಳಂಬೆಳಿಗ್ಗೆ ಹಲವು ಅಧಿಕಾರಿಗಳ ಮನೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ತುಮಕೂರು ಜಿಲ್ಲೆಯ ಮಧುಗಿರಿ ಉಪವಿಭಾಗದ ಕೊರಟಗೆರೆ ತಾಲೂಕು ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಇಲಾಖೆಯ EE ಹನುಮಂತರಾಯಪ್ಪ ಅವರ ಮನೆ ಮತ್ತು ಫಾರಂ ಹೌಸ್ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.

ಲೋಕಾಯುಕ್ತ ಎಸ್ಪಿ ವಲ್ಲಿಸಾಬ್ ಅವರ ನೇತೃತ್ವದಲ್ಲಿ ಏಕ ಕಾಲಕ್ಕೆ ಶಿರಾಗೇಟ್ ನಲ್ಲಿರುವ ಮನೆ ಹಾಗು ಮಿಡಿಗೇಶಿಯಲ್ಲಿರುವ ಫಾರಂ ಹೌಸ್ ಮೇಲೆ ದಾಳಿ ನಡೆದಿದೆ.

ಮಂಡ್ಯದ ಪಿಡಬ್ಲ್ಯೂ ಅಧಿಕಾರಿ ಹರ್ಷ ಅವರ ಮನೆ, ಕಚೇರಿ ಹಾಗೂ ಹಾಸನದ ಆಹಾರ ನಿರೀಕ್ಷಕ ಜಗನ್ನಾಥ್ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಮಂಗಳೂರು, ಚಿಕ್ಕಮಗಳೂರಿನಲ್ಲಿಯೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News