×
Ad

ಕಲಬುರಗಿ: ಶರಣಪ್ಪ ಮಡಿವಾಳರ ಮನೆ, ಕಚೇರಿ, ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತ ದಾಳಿ

Update: 2023-06-28 12:06 IST

ಕಲಬುರಗಿ: ಭ್ರಷ್ಟ ಅಧಿಕಾರಿಗೆ ಲೋಕಾಯುಕ್ತ ಅಧಿಕಾರಿಗಳು ಬೆಳಂಬೆಳಗ್ಗೆ ಶಾಕ್ ನೀಡಿದ್ದು, ಭ್ರಷ್ಟ ಅಧಿಕಾರಿ ಶರಣಪ್ಪ ಮಡಿವಾಳ ಅವರ ಕಚೇರಿ ಮತ್ತು ನಗರದ ಹೊರ ವಲಯದಲ್ಲಿನ ಖಣದಾಳ ಬಳಿಯ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಿ ಪರಿಶೀಲಿಸುತ್ತಿರುವ ಬಗ್ಗೆ ವರದಿಯಾಗಿದೆ.

ಸಿಂಧನೂರು ನಗರ ಮತ್ತು ಯೋಜನಾ ಪ್ರಾಧಿಕಾರ ಸಹಾಯಕ ನಿರ್ದೇಶಕರಾಗಿರುವ ಶರಣಪ್ಪನಿಗೆ ಲೋಕಾಯುಕ್ತರು ಶಾಕ್ ಕೊಟ್ಟಿದ್ದು, ಇಂದು ಬೆಳಗ್ಗೆ ಕಲಬುರಗಿ ಲೋಕಾಯುಕ್ತ ಅಧಿಕಾರಿಗಳಿಂದ ಕಲಬುರಗಿ ಹಾಗೂ ಸಿಂಧನೂರಿನಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮುನ್ನೊಳ್ಳಿ ಗ್ರಾಮದ ನಿವಾಸಿಯಾಗಿರುವ ಶರಣಪ್ಪ ಮಡಿವಾಳ ಸಿಂಧನೂರಿನ ಮನೆ ಮೇಲೆ ಲೋಕಾ ಎಸ್ಪಿ ಎ.ಆರ್. ಕರ್ನೂಲ್ ಮಾಗದರ್ಶನದಲ್ಲಿ ಲೋಕಾ ಎಸ್ ಐ ಅಕ್ಕಮಹಾದೇವಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ದಾಳಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News