×
Ad

ದಿಂಬಂ ಘಾಟ್ ನ ತಿರುವಿನಲ್ಲಿ ರಸ್ತೆಯ ತಡೆಗೋಡೆ ಏರಿದ ಲಾರಿ; ಅಪಾಯದಿಂದ ಚಾಲಕ ಪಾರು

Update: 2023-09-27 12:14 IST

ಚಾಮರಾಜನಗರ: ಮಹಾರಾಷ್ಟ್ರದ ಪುಣೆಯಿಂದ ಕೊಯಮತ್ತೂರಿಗೆ ಪಿವಿಸಿ ಪೈಪ್ ಸಾಗಿಸುತ್ತಿದ್ದ ಈಚರ್ ಲಾರಿಯೊಂದು ಕರ್ನಾಟಕ ತಮಿಳುನಾಡು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ದಿಂಬಂ ಘಾಟ್ ನ ತೀವ್ರವಾದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆಳಗೆ ಬೀಳುವ ಸ್ಥಿತಿಯಲ್ಲಿ ನಿಂತ ಘಟನೆ ಬುಧವಾರ ನಡೆದಿದೆ.

ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಈರೋಡ್ ಜಿಲ್ಲೆಯ ದಿಂಬಂ ಘಾಟ್ ಮೂಲಕ ಮಹಾರಾಷ್ಟ್ರದ ಪುಣೆಯಿಂದ ಕೊಯಮತ್ತೂರಿಗೆ ಪಿವಿಸಿ ಪೈಪ್ ತುಂಬಿದ ಈಚರ್ ಗಾಡಿ ತೆರಳುವಾಗ ದಿಂಬಂ ಘಾಟ್ ನ ಒಂಬತ್ತನೇ ತೀವ್ರವಾದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಘಟನೆ ನಡೆದಿದೆ.

ಈಚರ್ ವಾಹನ ರಸ್ತೆಯ  ತಡೆಗೋಡೆಗೆ ಹೊಡೆದು ಬೀಳುವ ಸ್ಥಿತಿಗೆ ಬಂದು ನಿಂತಿತು. ಈ ಘಟನೆಯಿಂದ ನಾಲ್ಕು ಗಂಟೆಗಳ ಕಾಲ  ವಾಹನ ಸಂಚಾರ ಸ್ಥಗಿತಗೊಂಡಿತು.

ಈ ಘಟನೆಯಲ್ಲಿ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ. ತಮಿಳುನಾಡಿನ ಪೊಲೀಸರು ಕ್ರೇನ್ ಮೂಲಕ ಈಚರ್ ವಾಹವನ್ನು ಸರಿಸಿದ ಬಳಿಕ ಸಂಚಾರ ಸುಗಮಗೊಂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News