×
Ad

ಮಂಡ್ಯ: ಅನಧಿಕೃತ ಕ್ಲಿನಿಕ್ ಬಂದ್ ಮಾಡಿದ ಆರೋಗ್ಯ ಇಲಾಖೆ

Update: 2023-11-20 19:06 IST

ಮಂಡ್ಯ, ನ.20: ಮದ್ದೂರು ತಾಲೂಕು ಕೊಪ್ಪ ಗ್ರಾಮದಲ್ಲಿ ಕಾಲವೆ ರಸ್ತೆಯಲ್ಲಿ ಉತ್ತರಪ್ರದೇಶ ಮೂಲದ ಡಾ.ಧೀರಜ್‍ಕುಮಾರ್ ಎಂಬುವರು ಅನಧಿಕೃತವಾಗಿ ನಡೆಸುತ್ತಿದ್ದ ವೆಂಕಟೇಶ್ವರ ಖಾಸಗಿ ಕ್ಲಿನಿಕ್ ಅನ್ನು ಮುಚ್ಚಿಸಲಾಗಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರ ಸೂಚನೆ ಮೇರೆಗೆ ಸೋಮವಾರ ಕ್ಲಿನಿಕ್‍ಗೆ ಭೇಟಿ ನೀಡಿ ಪರಿಶೀಲಿಸಿದ ತಾಲೂಕು ವೈದ್ಯಾಧಿಕಾರಿ ಡಾ.ರವೀಂದ್ರ ಬಿ.ಗೌಡ, ಯಾವುದೇ ದಾಖಲೆಗಳಿಲ್ಲದ ಹಿನ್ನೆಲೆಯಲ್ಲಿ ಕ್ಲಿನಿಕ್ ಮುಚ್ಚಿಸಿದರು.

ಅನಧಿಕೃತವಾಗಿ ಕ್ಲಿನಿಕ್‌ ನಡೆಸುತ್ತಿದ್ದ ವೈದ್ಯರ ಬಳಿ ಬಿ.ಎ.ಎಂ.ಎಸ್. ಪದವಿ ಸರ್ಟಿಫಿಕೇಟ್, ಕ್ಲಿನಿಕ್ ನೋಂದಣಿ ಪತ್ರ ಇಲ್ಲದಿರುವುದು ಪತ್ತೆಯಾಗಿದೆ. ಬಯೋ ಮೆಡಿಕಲ್ ವೇಸ್ಟ್ ಅನ್ನು ವಿಲೇವಾರಿ ಮಾಡುವ ಬಗ್ಗೆಯೂ ವೈದ್ಯರ ಬಳಿ ಮಾಹಿತಿ ಇಲ್ಲ ಎಂದು ಡಾ.ಗೌಡ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ, ಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದದ ಆರೋಗ್ಯ ನಿರೀಕ್ಷಾಣಾಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News