×
Ad

ಬಾಲಕಿಯೊಂದಿಗೆ ವಿವಾಹ: ಪೊಕ್ಸೊ ಕಾಯ್ದೆಯಡಿ ಯುವಕನ ವಿರುದ್ಧ ಪ್ರಕರಣ ದಾಖಲು

Update: 2023-09-04 23:46 IST

ಹುಣಸೂರು, ಸೆ.4: ಬಾಲಕಿಯನ್ನು ವಿವಾಹ ಆಗಿದ್ದ ಆರೋಪದಡಿ ಯುವಕನ ವಿರುದ್ದ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಬಂಧಿತ ಯುವಕನನ್ನು ಕೆ.ಆರ್.ನಗರ ಪಟ್ಟಣದ ನಿವಾಸಿ ಆನಂದ ಎಂದು ಗುರುತಿಸಲಾಗಿದೆ.

ಈತ ಹುಣಸೂರು ತಾಲೂಕಿನ ಗ್ರಾಮವೊಂದರಿಂದ ನಾಲ್ಕು ತಿಂಗಳ ಹಿಂದೆ ಇತರ ಧರ್ಮೀಯ ಬಾಲಕಿಯನ್ನು ಕರೆದೊಯ್ದಿದ್ದ ಎನ್ನಲಾಗಿದೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಾಲಕಿ ನಾಪತ್ತೆಯಾಗಿರುವ ಬಗ್ಗೆ ಬಾಲಕಿಯ ಕುಟುಂಬದವರು ಪ್ರಕರಣ ದಾಖಲಿಸಿದ್ದರು.

ಬೆಂಗಳೂರಿನಲ್ಲಿದ್ದ ಈತ ಬಾಲಕಿಗೆ 18 ವರ್ಷ ತುಂಬಿದ ಹಿನ್ನೆಲೆಯಲ್ಲಿ ತಾನೇ ಠಾಣೆಗೆ ಕರೆದುಕೊಂಡು ಬಂದು ಮದುವೆಯಾಗಿರುವುದಾಗಿ ತಿಳಿಸಿದ್ದ. ಆದರೆ ಆಕೆಯನ್ನು ಕರೆದೊಯ್ಯುವಾಗ ಅಪ್ರಾಪ್ತೆಯಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ, ಪೊಕ್ಸೊ ಕಾಯ್ದೆಯಡಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಬಾಲಕಿಯನ್ನು ಸಾಂತ್ವಾನ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News