×
Ad

ಪಾಲಿಕೆಯ ವಿಪಕ್ಷ ನಾಯಕರ ನೂತನ ಕಚೇರಿ ಉದ್ಘಾಟಿಸಿದ ಸಚಿವ ಲಾಡ್: ಭಾವುಕರಾಗಿ ಕಣ್ಣೀರು ಹಾಕಿದ ನಾಯಕಿ..!

Update: 2023-07-27 00:23 IST

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ಸುವರ್ಣ ಕಲಕುಂಟ್ಲ ಅವರ ಹೊಸ ಕಚೇರಿಯ ಉದ್ಘಾಟನೆಯನ್ನು ಕಾರ್ಮಿಕ ಸಚಿವ ಸಂತೋಷ ಲಾಡ್ ನೆರವೇರಿಸಿದರು. 

ಹುಬ್ಬಳ್ಳಿಯ ಮಹಾನಗರ ಪಾಲಿಕೆಯ ಆವರಣದಲ್ಲಿ ನೂತನವಾಗಿ ಕಚೇರಿಯನ್ನು ಉದ್ಘಾಟನೆ ಮಾಡಿದ ಸಚಿವ ಸಂತೋಷ ಲಾಡ್ ವಿಪಕ್ಷ ನಾಯಕಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.

ಇನ್ನೂ ಸನ್ಮಾನ ಸ್ವೀಕರಿಸಿದ ಸುವರ್ಣ ಕಲಕುಂಟ್ಲ ಭಾವುಕರಾಗಿ ಕಣ್ಣೀರು ಹಾಕಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಭಾವುಕರಾಗಿ ಕಣ್ಣೀರು ಹಾಕಿದ ವಿಪಕ್ಷ ನಾಯಕಿಗೆ ಸಚಿವ ಸಂತೋಷ ಲಾಡ್ ಧೈರ್ಯ ತುಂಬಿರುವುದು ಕಾರ್ಯಕ್ರಮಕ್ಕೆ ಹೊಸ ಮೆರಗನ್ನು ತಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News