×
Ad

ಬೆಂಗಳೂರು-ಮಂಗಳೂರು ರಸ್ತೆ ಅಭಿವೃದ್ದಿ ಕುರಿತು ಸಭೆ ನಡೆಸಲು ಚಿಂತನೆ : ಸಚಿವ ಸತೀಶ್ ಜಾರಕಿಹೊಳಿ

Update: 2024-07-22 21:06 IST

ಬೆಂಗಳೂರು : ಬೆಂಗಳೂರು ಮತ್ತು ಮಂಗಳೂರು ರಸ್ತೆ ಅಭಿವೃಧ್ಧಿ ಕುರಿತಾಗಿ ಚರ್ಚೆ ಮಾಡಲು ಮಂಗಳೂರಿನಲ್ಲಿ ಸಭೆಯನ್ನು ನಡೆಸಿ, ಸಲಹೆಗಳನ್ನು ಪಡೆದುಕೊಳ್ಳಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಸೋಮವಾರ ವಿಧಾನ ಪರಿಷತ್‍ನಲ್ಲಿ ಬಿಜೆಪಿ ಸದಸ್ಯ ಪ್ರತಾಪ್‍ಸಿಂಹ ನಾಯಕ್ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರು ಮತ್ತು ಮಂಗಳೂರಿಗೆ ರಸ್ತೆ ಸಂಪರ್ಕವು ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಬರಲಿದ್ದು, ರಾಜ್ಯ ಸರಕಾರ ಸಲಹೆಗಳನ್ನು ಮಾತ್ರ ಕೊಡಬಹುದು. ಆದರೆ ಕೇಂದ್ರ ಸರಕಾರವೇ ಕ್ರಮ ವಹಿಸಬೇಕು ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News