×
Ad

ನಾಳೆ ಬೆಂಗಳೂರಿಗೆ ಮೋದಿ ಭೇಟಿ; ಯಾವುದೇ ರೀತಿಯ ರೋಡ್ ಶೋ ಆಯೋಜಿಸಿಲ್ಲ ಎಂದ ಶೋಭಾ ಕರಂದ್ಲಾಜೆ

Update: 2023-08-25 14:10 IST

ಬೆಂಗಳೂರು, ಆ. 25: ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ‘ಇಸ್ರೋ’ದ ಅಧ್ಯಕ್ಷ ಸೋಮನಾಥ್ ಸೇರಿದಂತೆ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಆ.26ಕ್ಕೆ ಬೆಂಗಳೂರಿಗೆ ಆಗಮಿಸುತ್ತಿದ್ದು, ದಾಸರಹಳ್ಳಿ ಕ್ಷೇತ್ರದಲ್ಲಿ ಒಂದು ಕಿ.ಮೀ ವರೆಗೆ ರೋಡ್ ಶೋ ನಡೆಸಲಿದ್ದೇವೆ ಎಂದು ಮಾಜಿ ಸಚಿವ ಆರ್.‌ ಅಶೋಕ್‌ ಹೇಳದ್ದರು. 

ಇದೀಗ ಈ ಬಗ್ಗೆ  ಸುದ್ದಿಗಾರರೋಂದಿಗೆ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ʼʼಪ್ರಧಾನಿ ನೇರವಾಗಿ ಬೆಂಗಳೂರಿಗೆ ಬರುತ್ತಾರೆ. ಇಸ್ರೋ ವಿಜ್ಞಾನಿಗಳ ಜತೆ ಸಭೆ ನಡೆಸುತ್ತಾರೆ. ಬೆಳಗ್ಗೆ ಏರ್‌ಪೋರ್ಟ್‌ನಲ್ಲಿ ಅವರಿಗೆ ಸ್ವಾಗತ ಕಾರ್ಯಕ್ರಮ ಇದೆ, ರೋಡ್ ಶೋ ಯೋಜ‌ನೆ ಆಗಿಲ್ಲʼʼ ಎಂದು ಸ್ಪಷ್ಟನೆ ನೀಡಿದ್ದಾರೆ. 

ʼʼಗ್ರೀಸ್ ದೇಶದಿಂದ ನೇರವಾಗಿ ನಾಳೆ ಮುಂಜಾನೆ  ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ಮೋದಿಯವರಿಂದ ಇಸ್ರೊ ಕಚೇರಿಗೆ ಭೇಟಿ ನೀಡಿ ಅಲ್ಲಿನ ವಿಜ್ಞಾನಿಗಳನ್ನು ಅಭಿನಂದಿಸಲಿದ್ದಾರೆʼʼ ಎಂದು ಅವರು ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News