‘ಚಳವಳಿಗಳು’ ಫ್ರೀಡಂ ಪಾರ್ಕ್‍ಗೆ ಸೀಮಿತ ಆದೇಶ ಹಿಂಪಡೆಯಲು ಆಗ್ರಹಿಸಿ ಹೋರಾಟ: ಹಲವರು ಪೊಲೀಸ್ ವಶಕ್ಕೆ
ಬೆಂಗಳೂರು, ಸೆ.2: ಹೋರಾಟಗಳನ್ನು ಕೇವಲ ಫ್ರೀಡಂಪಾರ್ಕ್‍ಗೆ ಸೀಮಿತಗೊಳಿಸಿರುವ ಪೊಲೀಸರ ಆದೇಶವನ್ನು ಸರಕಾರ ಹಿಂಪಡೆಯಬೇಕೆಂದು ಆಗ್ರಹಿಸಿ ‘ಹೋರಾಟದ ಹಕ್ಕಿಗಾಗಿ ಜನಾಂದೋಲನ’ದ ವತಿಯಿಂದ ನಗರದ ಮೌರ್ಯ ಸರ್ಕಲ್ ಬಳಿಯ ಗಾಂಧಿ ಪ್ರತಿಮೆಯಿಂದ ವಿಧಾನಸೌಧದ ಅಂಬೇಡ್ಕರ್ ಪ್ರತಿಮೆಯ ವರೆಗೆ ಸೋಮವಾರ ನಡೆದ ಮೆರವಣಿಗೆಯ ಸಂದರ್ಭದಲ್ಲಿ ಹಲವು ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಿಜೆಪಿ ಸರಕಾರದ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ನಡೆಯುವ ಯಾವುದೇ ಪ್ರತಿಭಟನೆ, ಧರಣಿ ಹಾಗೂ ಮೆರವಣಿಗಳನ್ನು ಫ್ರೀಡಂಪಾರ್ಕ್‍ನಲ್ಲಿ ಮಾತ್ರ ನಡೆಸಬೇಕೆಂದು ಪೊಲೀಸ್ ಇಲಾಖೆ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಖಂಡಿಸಿ ಇದು ಸಂವಿಧಾನ ವಿರೋಧಿಯಾಗಿದ್ದು, ಕೂಡಲೇ ನಿಯಮ ಹಿಂಪಡೆಯಬೇಕು. ಪ್ರತಿರೋಧ ಜನರ ಮಧ್ಯೆ ಇರಬೇಕೆ ಹೊರತು, ಫ್ರೀಡಂ ಪಾರ್ಕ್‍ನ ಹಳೇ ಜೈಲಿನಲ್ಲಿ ಅಲ್ಲ ಎಂದು ಹೋರಾಟಗಾರರು ಪ್ರತಿಪಾದಿಸಿದರು.
ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಲೇಖಕಿ ದು.ಸರಸ್ವತಿ, ದಲಿತ ಸಂಘರ್ಷ ಸಮಿತಿಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಸಿಪಿಎಂನ ಜಿ.ಎನ್.ನಾಗರಾಜ್, ಸಾಮಾಜಿಕ ಹೋರಾಟಗಾರ್ತಿ ಮೈತ್ರೇಯಿ, ಎಐಸಿಸಿಟಿಯುನ ರಾಷ್ಟ್ರೀಯ ನಾಯಕ ಕ್ಲಿಫ್ಟನ್ ರೊಜಾರಿಯೋ, ಸಾಲಿಡಾರಿಟಿ ಯುತ್ ಮೂವ್ಮೆಂಟ್‍ನ ಲಬೀದ್ ಸೇರಿದಂತೆ ಹಲವಾರು ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದು ನಗರ ಸಶಸ್ತ್ರ ಮೀಸಲು ಪಡೆಯ ಉಪ ಪೆÇಲೀಸ್ ಆಯುಕ್ತರ ಕಚೇರಿಗೆ ಕರೆದೊಯ್ಯಲಾಯಿತು.
ಈ ಕುರಿತು ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ ಸಾಮಾಜಿಕ ಹೋರಾಟಗಾರ ರಾಜಶೇಖರ್ ಅಕ್ಕಿ, ‘ಹೋರಾಟಗಳನ್ನು ಫ್ರೀಡಂ ಪಾರ್ಕ್‍ಗೆ ಸೀಮಿತಗೊಳಿಸುವ ಪೆÇೀಲಿಸ್ ಆದೇಶವನ್ನು ಹಿಂಪಡೆಯಿರಿ ಎಂದು ನಾವು ರಾಜ್ಯ ಸರಕಾರಕ್ಕೆ ಪದೇ ಪದೇ ಒತ್ತಾಯಿಸಿದ್ದೇವೆ. ಆದರೂ, ಅವರು ಹಿಂಪಡೆಯಲಿಲ್ಲ. ಹಾಗಾಗಿ ಗಾಂಧಿ ಜಯಂತಿ ದಿವಸ ನಾವು ಪ್ರತಿಭಟನೆ ಹಮ್ಮಿಕೊಂಡಿದ್ದೆವು. ಆದರೆ ಪೊಲೀಸರು ನಮ್ಮ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರತಿಭಟನೆ ಮಾಡುವವರನ್ನು ಬಂಧಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.