×
Ad

ನಾನು ಮುಂಬೈ ಟೀಮ್ ಅಲ್ಲ, ಯಡಿಯೂರಪ್ಪ ಟೀಮ್ ಎಂದ ಸಂಸದ ಉಮೇಶ್ ಜಾಧವ್

Update: 2023-08-21 11:40 IST

ಕಲಬುರಗಿ: ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ʼಘರ್ ವಾಪಸ್ʼ ಬಗ್ಗೆ ಚರ್ಚೆ ನಡೆಯುತ್ತಿದೆ, ಆದರೆ ಅಧಿಕೃತವಾಗಿ ಪಾರ್ಟಿ ಬಿಟ್ಟು ಹೊಗುತ್ತೇನೆ ಎಂದು ಯಾರು ಕೂಡ ಹೇಳಿಲ್ಲ, ನನಗೂ ಯಾವುದೆ ಕರೆ ಬಂದಿಲ್ಲ ಎಂದು ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಹೇಳಿದ್ದಾರೆ. 

ಕಾಂಗ್ರೆಸ್ ನಿಂದ ಘರ್ ವಾಪಸ್ ಚರ್ಚೆ ವಿಚಾರ ಕಲಬುರಗಿಯಲ್ಲಿ ಮಾತನಾಡಿ,  ರಾಜಕೀಯ ಪಾರ್ಟಿಯಲ್ಲಿ ಒಂದು ಪಾರ್ಟಿಯಿಂದ ಇನ್ನೊಂದು ಪಾರ್ಟಿ ಸೇರಿದಾಗ ಹಳೆ ಕಾರ್ಯಕರ್ತರ ಮಧ್ಯೆ ಅಸಮಾಧಾನ ಇರುತ್ತೆ ಅದೇಲ್ಲಾ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಎಸ್ ಟಿ ಸೋಮಶೇಖರ್ ಗೆ ಯಡಿಯೂರಪ್ಪ ಬೊಮ್ಮಾಯಿ ಕರೆದು ಮಾತಾನಾಡಿ ಸಮಾಜಾಷಿಯಾಸಿದ್ದಾರೆ ನಾನು ಮುಂಬೈ ಟೀಮ್ ನಲ್ಲಿ ಮೊದಲಿನಿಂದಲು ಇಲ್ಲ ನಾವು ಮುಂಬೈ ಟೀಮ್ ಅಂತಾ ಯೂನಿಟಿ ಮಾಡಿಲ್ಲ ನಾವು ಯಡಿಯೂರಪ್ಪ ಟೀಮ್ ನಲ್ಲಿ ಇದ್ದೇವೆ  ಎಂದರು.

ಪಾರ್ಟಿಯಿಂದ ಲೀಡರ್ ಹೊರ ಹೊದರೂ ಮತದಾರರು ಹೋಗೊದಿಲ್ಲ, ಬಿಜೆಪಿ ಮತ್ತೊಮ್ಮೆ 25 ಸೀಟ್ ಗೆಲ್ಲುವ ವಿಶ್ವಾಸ ಇದೆ ಚುನಾವಣೆ ಬಂದಾಗ ಎಲ್ಲಾ ಪಾರ್ಟಿಯವರು ಬೇರೆ ಬೇರೆ ಲೀಡರ್ ಗಳನ್ನ ಕರೆತರುವ ಪ್ರಯತ್ನ ನಡೆಯುತ್ತೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News