×
Ad

ಮೈಸೂರು | ಲಿಂಗಾಂಬುಧಿ ಕೆರೆಯ ನೀರು ಕಲುಷಿತ: ಸಾವಿರಾರು ಮೀನುಗಳು ಸಾವು

Update: 2023-08-29 21:19 IST

ಮೈಸೂರು,ಆ.29: ಮೈಸೂರು ನಗರದ ಲಿಂಗಾಂಬುಧಿ ಕೆರೆಯ ನೀರು ಕಲುಷಿತಗೊಂಡು ಸಾವಿರಾರು ಮೀನುಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ರಾಮಕೃಷ್ಣ ನಗರದಲ್ಲಿರುವ ಲಿಂಗಾಂಬುದಿ ಕೆರೆಗೆ ನಿರಂತರವಾಗಿ ಒಳಚರಂಡಿ ನೀರು ಬರುತ್ತಿರುವುದರಿಂದ ಕೆರೆ ಕಲುಷಿತಗೊಂಡು ನೀರೆಲ್ಲಾ ಹಸಿರು ಬಣ್ಣಕ್ಕೆ ತಿರುಗಿದೆ. ರಾಸಾಯನಿಕ ಮಿಶ್ರಣ ಹಾಗೂ ಅಮ್ಲಜನಕ ಕೊರತೆಯಿಂದಾಗಿ ಮೀನುಗಳು ಸಾವನ್ನಪ್ಪಿರಬಹುದು ಎಂದು ಊಹಿಸಲಾಗಿದೆ.

ಕೆರೆಯ ಸುತ್ತಾ ಕೆಟ್ಟ ವಾಸನೆ ಬರುತ್ತಿದ್ದು, ಮಂಗಳವಾರ ಮುಂಜಾನೆ ವಾಯುವಿಹಾರಿಗಳು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News