ಕೆಪಿಸಿಸಿ ಪ್ರಚಾರ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ
Update: 2025-07-29 23:27 IST
ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪ್ರಚಾರ ಸಮಿತಿ ಸಹ ಅಧ್ಯಕ್ಷರನ್ನಾಗಿ ರಾಜ್ಯಸಭಾ ಮಾಜಿ ಸದಸ್ಯ ಡಾ.ಎಲ್. ಹನುಮಂತಯ್ಯ ಅವರನ್ನು ನೇಮಕ ಮಾಡಲಾಗಿದೆ.
ಮಂಗಳವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಸಂಬಂಧ ಅನುಮೋದನೆ ನೀಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ.
ಉಪಾಧ್ಯಕ್ಷರಾಗಿ ರಾಣಿ ಸತೀಶ್ , ಕಿಮ್ಮನೆ ರತ್ನಾಕರ್, ಜೆ.ಆರ್.ಲೋಬೋ, ಎಂ.ಶಿವಣ್ಣ, ಜಲಜಾ ನಾಯ್ಕ್, ವೀಣಾ ಅಚ್ಚಯ್ಯ, ಜೆ.ಡಿ. ನಾಯಕ್, ಜಿ.ಮಂಜುನಾಥ್, ಡಾ. ಭೀಮಣ್ಣ ಮೇಟಿ ಹಾಗೂ ಅಬ್ದುಲ್ ಮುನೀರ್ ಅವರನ್ನು ನೇಮಿಸಲಾಗಿದೆ.
ಪ್ರಚಾರ ಸಮಿತಿ ಮುಖ್ಯ ಸಂಯೋಜಕರನ್ನಾಗಿ ಪ್ರಕಾಶ ಕೆ.ರಾಠೋಡ್, ಡಾ.ಸಿ.ಎಸ್. ದ್ವಾಕರನಾಥ್, ಸುಧೀರ್ ಮುರೋಳಿ, ಪ್ರಸಿದ್ಧ ಬಾಬು, ಕೃಪಾ ಅಳ್ವಾ, ಆದರ್ಶ ಯಲ್ಲಪ್ಪ, ಎಸ್.ನಾರಾಯಣ, ಯೋಗೇಶ್ವರ್ ವಿಜಯ್, ಶಂಬು ಶೆಟ್ಟಿ ಸೇರಿದಂತೆ ಒಟ್ಟು ಹನ್ನೆರಡು ಮಂದಿಯನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.