ಸಣ್ಣ ವ್ಯಾಪಾರಸ್ಥರಿಗೆ ನೀಡಿದ ವಾಣಿಜ್ಯ ತೆರಿಗೆ ಇಲಾಖೆ ನೋಟೀಸ್ ಹಿಂಪಡೆಯದಿದ್ದರೆ ಪ್ರತಿಭಟನೆ : ಸಣ್ಣ ವರ್ತಕರ ಸಂಘ ಎಚ್ಚರಿಕೆ
Update: 2025-07-19 21:26 IST
ಸಾಂದರ್ಭಿಕ ಚಿತ್ರ | PC : freepik.com
ಬೆಂಗಳೂರು : ವಾಣಿಜ್ಯ ತೆರಿಗೆ ಇಲಾಖೆಯು ಲಕ್ಷಾಂತರ ರೂ.ತೆರಿಗೆ ಪಾವತಿಸಲು ನೂರಾರು ಸಣ್ಣ ವ್ಯಾಪಾರಸ್ಥರಿಗೆ ಈಗಾಗಲೇ ನೋಟೀಸ್ ಜಾರಿ ಮಾಡಿದ್ದು, ನೋಟೀಸ್ ಹಿಂಪಡೆಯದಿದ್ದರೆ, ಜು.23 ರಿಂದ ಮೂರು ದಿನಗಳ ಕಾಲ ಪ್ರತಿಭಟನೆ ಮಾಡಲಾಗುತ್ತದೆ ಎಂದು ಸಣ್ಣ ವರ್ತಕರ ಸಂಘ ಎಚ್ಚರಿಕೆ ನೀಡಿದೆ.
ಶನಿವಾರದಂದು ಸಂಘವು ಪ್ರಕಟನೆ ಹೊರಡಿಸಿದ್ದು, ಫೋನ್ ಪೇ, ಗೂಗಲ್ ಪೇ ಸೇರಿದಂತೆ ಯುಪಿಐ ವ್ಯವಹಾರ ನಡೆಸಿರುವ ವರ್ತಕರಿಗೆ ಈ ನೋಟೀಸ್‍ಗಳು ಜಾರಿಯಾಗಿದೆ. ಇದರಿಂದ ವ್ಯಾಪಾರಕ್ಕೆ ತೊಂದರೆಯಾಗುತ್ತಿದ್ದು, ರಾಜ್ಯಾದ್ಯಂತ ಎಲ್ಲ ವ್ಯಾಪಾರಿಗಳು ಈ ಪ್ರತಿಭಟನೆಗೆ ಒಂದಾಗಬೇಕು ಎಂದಿದೆ.
ಜು.23ರಂದು ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಬಂದ್ ಇರಲಿದೆ. ಜು.24ರಂದು ಗುಟ್ಕಾ ಸಿಗರೇಟ್ ವ್ಯಾಪಾರ ಬಂದ್ ಆಗಲಿದ್ದು, ಜು.25ರಂದು ಎಲ್ಲ ರೀತಿಯ ಬೇಕರಿ ಹಾಗೂ ಕಾಂಡಿಮೆಂಟ್ಸ್ ಅಂಗಡಿಗಳ ವ್ಯಾಪಾರ ಬಂದ್ ಇರಲಿದೆ ಎಂದು ಸಂಘವು ತಿಳಿಸಿದೆ.