×
Ad

ರಾಜ್ಯ ಸರಕಾರದಿಂದ ʼಗ್ಯಾರಂಟಿʼ ಯೋಜನೆಗಳ ಅನುದಾನ ದುರ್ಬಳಕೆ : ನಿಖಿಲ್ ಕುಮಾರಸ್ವಾಮಿ ಆರೋಪ

Update: 2025-02-27 19:02 IST

ಬೆಂಗಳೂರು : ರಾಜ್ಯ ಸರಕಾರ ‘ಗೃಹಲಕ್ಷ್ಮಿ’ ಸೇರಿದಂತೆ ಗ್ಯಾರಂಟಿ ಯೋಜನೆಗಳ ಅನುದಾನವನ್ನು ಚುನಾವಣೆಗಳನ್ನು ಗೆಲ್ಲಲು ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಗ್ಯಾರಂಟಿ ಹಣವನ್ನು ಕಟಾ ಕಟ್ ಹಾಕುತ್ತೇವೆ ಹೇಳಿದ್ದರು. ಆದರೆ, ಅವರು ಹೇಳಿದಂತೆ ಜನರಿಗೆ ಹಣ ಜಮೆ ಮಾಡುತ್ತಿಲ್ಲ. ನುಡಿದಂತೆ ನಡೆಯುತ್ತಿಲ್ಲ ಎಂದು ದೂರಿದರು.

ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ತಮ್ಮ ಬ್ಯಾಂಕ್ ಖಾತೆಗಳಿಗೆ ಜಮೆ ಆಗದ ಕಾರಣಕ್ಕೆ ಮಹಿಳೆಯರು ಗೊಂದಲಕ್ಕೆ ತುತ್ತಾಗಿದ್ದಾರೆ. ಮನಸ್ಸಿಗೆ ಬಂದ ಹಾಗೆ ಸರಕಾರ ಹಣವನ್ನು ಜಮೆ ಮಾಡುತ್ತಿದೆ. ಚುನಾವಣೆಗಳು ಬಂದಾಗ ಮೂರ್ನಾಲ್ಕು ತಿಂಗಳ ಹಣವನ್ನು ಒಮ್ಮೆಲೇ ಜಮೆ ಮಾಡುತ್ತಾರೆ. ಗ್ಯಾರಂಟಿ ಮೂಲಕ ಕಾಂಗ್ರೆಸ್ ಸರಕಾರ ಜನರನ್ನು ಧಿಕ್ಕು ತಪ್ಪಿಸುತ್ತಿದ್ದು, ಇದರ ವಿಧಾನಮಂಡಲದ ಒಳಗೆ, ಹೊರಗೆ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಗ್ಯಾರಂಟಿ ನೆಪದಲ್ಲಿ ರಾಜ್ಯದ ಜನರ ಮೇಲೆ ತೆರಿಗೆ, ಬೆಲೆ ಏರಿಕೆ ಭಾರ ಹೇರಿ ಸುಲಿಗೆ ಮಾಡುತ್ತಿದೆ. ಇನ್ನೊಂದು ಕಡೆ ಗ್ಯಾರಂಟಿ ಕೊಟ್ಟು ಜನರನ್ನು ಉದ್ಧಾರ ಮಾಡುತ್ತಿದ್ದೇವೆಂದು ಸುಳ್ಳು ಹೇಳುತ್ತಿದೆ. ಇಂತಹ ದ್ವಿಮುಖ ನೀತಿ ಬೇಡ. ಸಕಾಲಕ್ಕೆ ಗ್ಯಾರಂಟಿ ಹಣ ಜನರಿಗೆ ಮುಟ್ಟಬೇಕು. ಈ ಬಗ್ಗೆ ಜೆಡಿಎಸ್ ಹೋರಾಟ ನಡೆಸುತ್ತದೆ ಎಂದು ಅವರು ತಿಳಿಸಿದರು.

ದ್ವೇಷದ ರಾಜಕಾರಣ: ಕೇತಗಾನಹಳ್ಳಿ ಜಮೀನು ಸರ್ವೆ ವಿಚಾರಕ್ಕೆ ಏನು ಹೊಸದಲ್ಲ. ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಕಟ್ಟಿ ಹಾಕಲು ಪ್ರಯತ್ನ ನಡೆಸಿದ್ದಾರೆ. ಈ ಜಮೀನು ನಮ್ಮ ತಂದೆಯವರು 1985 ರಲ್ಲಿ ಈ ಜಮೀನು ಖರೀದಿ ಮಾಡಿದ್ದಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News