×
Ad

ಎಲ್ಲರೂ ಮಂತ್ರಿ ಆಗಲು ಸಾಧ್ಯವಿಲ್ಲ: ಆರ್.ವಿ. ದೇಶಪಾಂಡೆ

Update: 2025-07-08 19:08 IST

ಆರ್.ವಿ.ದೇಶಪಾಂಡೆ

ಬೆಂಗಳೂರು: ಮಂತ್ರಿ ಆಗಬೇಕೆಂಬ ಆಸೆ ಇದ್ದರೆ ತಪ್ಪಲ್ಲ. ಅರ್ಹತೆ ಎಲ್ಲರಿಗೂ ಇದೆ. ಆದರೆ, ಎಲ್ಲರೂ ಮಂತ್ರಿ ಆಗಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 224 ಚುನಾಯಿತ ಸದಸ್ಯರಿದ್ದಾರೆ. ಆಡಳಿತರೂಢ ಪಕ್ಷ ನಮ್ಮದು. 30 ಅಥವಾ 35 ಮಂದಿ ಸಚಿವರಾಗಬಹುದಷ್ಟೆ. ಹೀಗಾಗಿ, ಎಲ್ಲರೂ ಮಂತ್ರಿ ಆಗಲು ಸಾಧ್ಯವಿಲ್ಲ ಎಂದು ನುಡಿದರು.

ಸಿಎಂ ಬದಲಾವಣೆ ಆಗಬೇಕೆಂದರೆ ಒಂದು ಪ್ರಜಾಪ್ರಭುತ್ವದಲ್ಲಿ ಆಗಬೇಕು, ಇನ್ನೊಂದು ಪಕ್ಷದ ಶಾಸಕರಿಂದ ಆಗಬೇಕು. ಕರ್ನಾಟಕದಲ್ಲಿ ಆ ರೀತಿಯ ವಾತಾವರಣ ಇಲ್ಲ ಎಂದ ಅವರು, ರಾಜ್ಯ ಸರಕಾರದ ಕಾರ್ಯಕ್ರಮಗಳು ಜನರಿಗೆ ಮುಟ್ಟಿದೆ. ಮತ್ತಷ್ಟು ಕಾರ್ಯಕ್ರಮಗಳು ಸರಕಾರ ನೀಡಲಿದೆ ಎನ್ನುವ ಭರವಸೆ ಇದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News