ಎಂಎಲ್‌ಸಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ಆರತಿ ಕೃಷ್ಣರನ್ನು ಸನ್ಮಾನಿಸಿದ ಅನಿವಾಸಿ ಭಾರತೀಯರು
Update: 2025-09-11 21:57 IST
ಆರತಿ ಕೃಷ್ಣ
ಬೆಂಗಳೂರು : ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಆರತಿ ಕೃಷ್ಣರನ್ನು ಅನಿವಾಸಿ ಭಾರತೀಯ ನಾಯಕರು ಅವರ ಕಚೇರಿಯಲ್ಲಿ ಸನ್ಮಾನಿಸಿದರು.
ಆರತಿ ಕೃಷ್ಣರನ್ನು ಸನ್ಮಾನಿಸಿದವರ ಪೈಕಿ, ಸೌದಿ ಅರೇಬಿಯಾದಲ್ಲಿನ ಅಲ್ ಮುಝೈನ್ ಕಂಪೆನಿಯ ಸಿಇಒ, ಅನಿವಾಸಿ ಭಾರತೀಯ ಉದ್ಯಮಿ ಝಕರಿಯಾ ಜೋಕಟ್ಟೆ, ಬಹ್ರೈನ್ ನ ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಮನ್ಸೂರ್ ಹಾಗೂ ದುಬೈ ಮೂಲದ ಹೋಟೆಲ್ ಉದ್ಯಮಿ ಪ್ರವೀಣ್ ಶೆಟ್ಟಿ ಇದ್ದರು.
ಆರತಿ ಕೃಷ್ಣರ ಸಾಮಾಜಿಕ ಸೇವೆಯನ್ನು ಶ್ಲಾಘಿಸಿದ ಅನಿವಾಸಿ ಭಾರತೀಯ ನಿಯೋಗವು, ಅವರಿಗೆ ಶುಭ ಕೋರಿತು.
ದುಬೈ ಮತ್ತು ಶಾರ್ಜಾದ ಗಡಿಯಾರ್ ಗ್ರೂಪ್ ಆಫ್ ಕಂಪನೀಸ್ ನ ಆಡಳಿತ ನಿರ್ದೇಶಕ ಇಬ್ರಾಹಿಮ್ ಗಡಿಯಾರ್ ಅವರು ಡಾ.ಆರತಿ ಕೃಷ್ಣ ಅವರನ್ನು ಮುಖ್ಯಮಂತ್ರಿಗಳ ನಿವಾಸದಲ್ಲಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.