×
Ad

ಅತಿಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕಕ್ಕೆ 2ನೆ ಸ್ಥಾನ

Update: 2023-07-29 23:08 IST

ಸಾಂದರ್ಭಿಕ ಚಿತ್ರ (PTI)

ಬೆಂಗಳೂರು: ‘ನಿತ್ಯಹರಿದ್ವರ್ಣದ ಕಾಡುಗಳ ಪಶ್ಚಿಮಘಟ್ಟ ಮತ್ತು 5 ಹುಲಿ ಸಂರಕ್ಷಿತ ತಾಣಗಳಿಂದ ಸಮೃದ್ಧವಾದ ಕರ್ನಾಟಕ ರಾಜ್ಯ ದೇಶದಲ್ಲೇ ಅತಿಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯಗಳ ಪೈಕಿ 2ನೆ ಸ್ಥಾನ ಪಡೆದಿರುವುದು ಸಂತಸದ ವಿಷಯ’ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಶನಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ರಾಷ್ಟ್ರೀಯ ಹುಲಿ ಪ್ರಾಧಿಕಾರ ದೇಶದಲ್ಲಿನ ಹುಲಿಗಳ ಸಂಖ್ಯೆ ಕುರಿತಂತೆ ಇಂದು ಅಧಿಕೃತ ಪ್ರಕಟಣೆ ಹೊರಡಿಸಿದೆ. ಕರ್ನಾಟಕದಲ್ಲಿ 2018ರಲ್ಲಿ ನಡೆದ ಹುಲಿ ಗಣತಿಯಲ್ಲಿ 404 ಪ್ರತ್ಯೇಕ ಹುಲಿಗಳು ಕ್ಯಾಮರಾ ಟ್ರ್ಯಾಪ್ ಆಗಿದ್ದು, ವಿಶ್ಲೇಷಣೆಯಲ್ಲಿ ಸುಮಾರು 524 ಹುಲಿಗಳಿವೆ ಎಂದು ಅಂದಾಜಿಸಲಾಗಿತ್ತು, ಈಬಾರಿ 435 ಪ್ರತ್ಯೇಕ ಹುಲಿಗಳು ಕ್ಯಾಮರಾ ಟ್ರ್ಯಾಪ್ ಆಗಿದ್ದು, ವಿಶ್ಲೇಷಣೆಯ ರೀತ್ಯ ರಾಜ್ಯದಲ್ಲಿ 563 ವ್ಯಾರ್ಘಗಳಿವೆ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಲಾಗಿದೆ. ಇದು ಸಂತಸದ ಸಂಗತಿ’ ಎಂದು ತಿಳಿಸಿದ್ದಾರೆ.

‘ಹುಲಿಗಳ ಗಣತಿ ಅತ್ಯಂತ ಕಷ್ಟಕರವಾದ ಕಾರ್ಯವಾಗಿದ್ದು, ಇದರಲ್ಲಿ ತಮ್ಮನ್ನು ತೊಡಗಿಸಿಕೊಂಡ ಎಲ್ಲ ಸಿಬ್ಬಂದಿಗೂ, ಹುಲಿಗಳಿಗೆ ಉತ್ತಮ ವಾತಾವರಣ ಕಲ್ಪಿಸಲು ಶ್ರಮಿಸುತ್ತಿರುವ ಅರಣ್ಯ ಸಿಬ್ಬಂದಿ ಮತ್ತು ವನ್ಯಜೀವಿ, ಪರಿಸರ ಪ್ರೇಮಿಗಳಿಗೆ ಅಭಿನಂದನೆ ಮತ್ತು ಅಂತಾರಾಷ್ಟ್ರೀಯ ಹುಲಿದಿನದ ಶುಭಾಶಯಗಳು’ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News