×
Ad

ವಿಪಕ್ಷ ನಾಯಕನ ಆಯ್ಕೆ ಮಾಡದೇ ಸದನದಲ್ಲಿ ಪಾಲ್ಗೊಳ್ಳಬಾರದು ಅಂತ ಏನಾದರೂ ರೂಲ್ಸ್ ಇದೆಯೇ?: ಆರ್. ಅಶೋಕ್ ಪ್ರಶ್ನೆ

Update: 2023-07-21 12:43 IST

ಬೆಂಗಳೂರು: 'ವಿಪಕ್ಷ ನಾಯಕನ ಆಯ್ಕೆ ಮಾಡದೇ ಸದನದಲ್ಲಿ ಪಾಲ್ಗೊಳ್ಳಬಾರದು ಅಂತ ಏನಾದರೂ ಕಾನೂನು ಇದೆಯೇ' ಎಂದು ಮಾಜಿ ಸಚಿವ ಆರ್. ಅಶೋಕ್ ಪ್ರಶ್ನೆ ಮಾಡಿದ್ದಾರೆ. 

ಶುಕ್ರವಾರ ಶಾಸಕರ ಅಮಾನತು, ಶಿಷ್ಟಾಚಾರ ಉಲ್ಲಂಘನೆ ಆರೋಪಿಸಿ ವಿಧಾನ ಸೌಧದ ಗಾಂಧಿ ಪ್ರತಿಮೆ ಬಳಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

''ವಿರೋಧಪಕ್ಷದ ನಾಯಕನ ಆಯ್ಕೆ ವಿಚಾರ ನಮಗೆ ಬಿಟ್ಟಿದ್ದು. ನಮ್ಮ ಎಲ್ಲಾ ಶಾಸಕರೂ ಸಹ ವಿರೋಧ ಪಕ್ಷದ ನಾಯಕರೇ. ಸ್ಪೀಕರ್ ಕ್ರಮ ಖಂಡಿಸಿ ನಮ್ಮ‌ಹೋರಾಟ ಮುಂದಿವರಿಯಲಿದೆ'' ಎಂದರು. 

''ಹಿಟ್ಲರ್ ರೀತಿ ವಿರೋಧಿಗಳನ್ನ ಹೊರಗೆ ಹಾಕುವ ಕೆಲಸ ಕಾಂಗ್ರೆಸ್ ಮಾಡಿದೆ. ಉಗ್ರರಿಗೆ ಕಾಂಗ್ರೆಸ್ ಸರ್ಕಾರ ಬಂದರೆ ಹಬ್ಬದೂಟದ ರೀತಿ. ಅರೆಸ್ಟ್ ಆದವರ ಬಳಿ ಪಿಸ್ತೂಲ್,ಗುಂಡುಗಳು,ಗ್ರಾನೈಡ್ ಎಲ್ಲಾ ಸಿಕ್ಕರೂ, ಅಪರಾಧಿಗಳಲ್ಲ ಅಂದರೆ ಹೇಗೆ? ಎಂದು ಪ್ರಶ್ನಿಸಿದರು. \




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News