×
Ad

ಕನ್ನಡ ಭಾಷೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಆರೋಪ : ಸೋನು ನಿಗಮ್‍ಗೆ ಪೊಲೀಸರ ನೋಟಿಸ್

Update: 2025-05-05 19:25 IST

ಸೋನು ನಿಗಮ್ | PC : X  

ಬೆಂಗಳೂರು : ಕನ್ನಡ ಭಾಷೆ ಹಾಗೂ ಕನ್ನಡಿಗರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಪ್ರಕರಣದಡಿ ಗಾಯಕ ಸೋನು ನಿಗಮ್ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕನ್ನಡ ಭಾಷೆ ಹಾಗೂ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿರುವುದರಿಂದ ಸೋನು ನಿಗಮ್ ಅವರ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ವಾರ ವಿಚಾರಣೆಗೆ ಹಾಜರಾಗುವಂತೆ ಸೋನು ನಿಗಮ್‍ಗೆ ನೋಟಿಸ್ ನೀಡಿದ್ದೇವೆ ಹಾಗೂ ಕಾರ್ಯಕ್ರಮ ಆಯೋಜಕರನ್ನೂ ಕರೆದು ಮಾಹಿತಿ ಪಡೆಯುತ್ತೇವೆ ಎಂದರು.

ಸಂಗೀತ ಕಾರ್ಯಕ್ರಮದಲ್ಲಿ ಕನ್ನಡ ಹಾಡು ಹಾಡುವಂತೆ ಕೇಳಿರುವುದಕ್ಕೂ ಗಾಯಕ ಸೋನು ನಿಗಮ್ ಅವರ ಪ್ರತಿಕ್ರಿಯೆಗೂ ಸಂಬಂಧವಿಲ್ಲ. ಕನ್ನಡಿಗರಿಗೆ ಅಪಮಾನ ಆಗುವಂತಹ ಹೇಳಿಕೆ ಅದಾಗಿದೆ. ಈ ಬಗ್ಗೆ ವಿಚಾರಣೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದು ಸಿ.ಕೆ.ಬಾಬಾ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News