×
Ad

ದಯಾಮರಣ ಕೋರಿ ರಾಷ್ಟ್ರಪತಿ, ರಾಜ್ಯಪಾಲರಿಗೆ ಪತ್ರ ಬರೆದ ಪೊಲೀಸ್ ಸಿಬ್ಬಂದಿ

Update: 2024-03-01 15:43 IST

ಸಾಂದರ್ಭಿಕ ಚಿತ್ರ Photo: PTI

ವಿಜಯಪುರ: ತಮಗೆ ದಯಾಮರಣಕ್ಕೆ ಅನುಮತಿ ನೀಡುವಂತೆ ಕೋರಿ ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಪೊಲೀಸ್ ಸಿಬ್ಬಂದಿ ಪತ್ರ ಬರೆದಿರುವ ಬಗ್ಗೆ ವರದಿಯಾಗಿದೆ.

ಡಿಜಿ ಅವರು HRM-3(1)270/2022-23 ಹಾಗೂ HD/93/PPS/2022 ರ ಆದೇಶದಂತೆ ಪಾರ್ದರ್ಶಕವಾಗಿ ಪೋರ್ಟಲ್ ಪ್ರಕಾರ ಅರ್ಹ ಸಿಬ್ಬಂದಿಗಳಿಗೆ ವರ್ಗಾವಣೆ ಆದೇಶ ಮಾಡುವಂತೆ ತಿಳಿಸಿದ್ದಾರೆ. ಈ ಹಿನ್ನಲೆ ನಾವು ಅರ್ಜಿ ಸಲ್ಲಿಸಿ ಒಂದು ವರ್ಷ ಕಳೆದಿದೆ. ಹೀಗಿದ್ದೂ ಪೊಲೀಸ್ ಇಲಾಖೆಯಲ್ಲಿ ಸಾಮಾನ್ಯ ವರ್ಗದವರಿಗೆ ಕಳೆದ ನಾಲ್ಕು ವರ್ಷಗಳಿಂದ ವರ್ಗಾವಣೆ ನೀಡಿಲ್ಲ ಎಂದು ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಮನವಿಯಲ್ಲಿ ಆರೋಪಿಸಿದ್ದಾರೆ.

ನಮಗೆ ಅನಾರೋಗ್ಯ ಪೀಡಿತ, ವಿಕಲಾಂಗ ಪೋಷಕರಿದ್ದಾರೆ. ಗೃಹ ಸಚಿವರು ನಿವೃತ್ತ ಯೋಧರ ವರ್ಗಾವಣೆಗೆ ಆದೇಶ ಮಾಡಿರುತ್ತಾರೆ. ಇದೇ ರೀತಿ ಸಾಮಾನ್ಯ ವರ್ಗದ ಪೊಲೀಸರಿಗೂ ವರ್ಗಾವಣೆ ನೀಡಬೇಕು. ಇಲ್ಲವೇ ನಮ್ಮ ಪೋಷಕರಿಗೆ ಮತ್ತು ನಮಗೆ ದಯಾಮರಣ ನೀಡಬೇಕೆಂದು ಪತ್ರದಲ್ಲಿ ಮನವಿ ಮಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News