×
Ad

ಸಚಿವ ಕೆ.ಜೆ. ಜಾರ್ಜ್ ವಿರುದ್ಧ ಪೋಸ್ಟ್: ಆರೋಪಿಯ ಬಂಧನ

Update: 2023-12-16 19:44 IST

ಕೆ.ಜೆ. ಜಾರ್ಜ್

ಬೆಂಗಳೂರು: ತೆಲಂಗಾಣ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್ ವಿರುದ್ಧ ಎಕ್ಸ್ ಖಾತೆಯಲ್ಲಿ ದುರುದ್ದೇಶಪೂರಿತ ಪೋಸ್ಟ್ ಮಾಡಿದ್ದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷದ ಐಟಿ ಸೆಲ್ ಉದ್ಯೋಗಿಯನ್ನು ಇಲ್ಲಿನ ಪೂರ್ವ ವಿಭಾಗದ ಸೆನ್ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಬಿಆರ್ಎಸ್ ಪಕ್ಷದ ಕಾರ್ಯಕರ್ತ, ಪಕ್ಷದ ಐಟಿ ಸೆಲ್ ಉದ್ಯೋಗಿಯಾಗಿರುವ ತೆಲಂಗಾಣ ಕರೀಂನಗರ ನಿವಾಸಿ ರವಿಕಾಂತ್ ಶರ್ಮಾ(33) ಎಂಬಾತನನ್ನು ಬಂಧಿಸಲಾಗಿದೆ. 

ಕರ್ನಾಟಕದ ವಿದ್ಯುತ್ ಪರಿಸ್ಥಿತಿ ಮತ್ತು ಗೃಹ ಜ್ಯೋತಿ ಯೋಜನೆಯ ಅನುಷ್ಠಾನದ ಕುರಿತು ಆರೋಪಿಯು ಜಾಲತಾಣ ‘ಎಕ್ಸ್'ನಲ್ಲಿ ಇಂಧನ ಸಚಿವರ ನಕಲಿ ಆಡಿಯೋ ಕ್ಲಿಪ್ ಪ್ರಸಾರ ಮಾಡಿದ್ದ. ಈ ಬಗ್ಗೆ ‘ಎಕ್ಸ್'ನಿಂದ ಮಾಹಿತಿ ಪಡೆದು ಪೊಲೀಸರು ತನಿಖೆಯನ್ನು ಆರಂಭಿಸಿದ್ದರು.

ತೆಲುಗು ಸ್ಕ್ರೈಬ್(TelaguScribe) ಎಂಬ ‘ಎಕ್ಸ್' ಖಾತೆಯಲ್ಲಿ ಇಂಧನ ಸಚಿವರ ವಿರುದ್ಧ ದುರುದ್ದೇಶಪೂರಿತ ಆಡಿಯೋ ಪೋಸ್ಟ್ ಮಾಡಿದ್ದ ಕುರಿತು ಬೆಸ್ಕಾಂ ಜನರಲ್ ಮ್ಯಾನೇಜರ್ ಪೂರ್ವ ವಿಭಾಗದ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News