×
Ad

ಜೆಡಿಎಸ್‌ ನಿಂದ ಪ್ರಜ್ವಲ್‌ ಅಮಾನತು ಕೇವಲ ಕಣ್ಣೊರೆಸುವ ತಂತ್ರವಷ್ಟೇ: ಕಾಂಗ್ರೆಸ್

Update: 2024-04-30 14:12 IST

Photo:X/Congresskarnataka

ಬೆಂಗಳೂರು: ಪ್ರಜ್ವಲ್ ರೇವಣ್ಣನ ಕೃತ್ಯಗಳನ್ನು ಒಪ್ಪಿಕೊಳ್ಳುತ್ತಲೇ ಜೆಡಿಎಸ್ “ಪ್ರಜ್ವಲ್ ಅಮಾನತು“ ಎಂಬ ನಾಟಕವಾಡುತ್ತಿದೆ, ಎಚ್‌ ಡಿ ಕುಮಾರಸ್ವಾಮಿ ಅವರಿಗೆ ನಿಜಕ್ಕೂ ಮಹಿಳೆಯರ ಬಗ್ಗೆ ಕಾಳಜಿ ಇದ್ದಿದ್ದೇ ಆದರೆ ಅಮಾನತು ಮಾಡುತ್ತಿರಲಿಲ್ಲ, ಉಚ್ಚಾಟನೆ ಮಾಡುತ್ತಿದ್ದರು ಕಾಂಗ್ರೆಸ್‌ ಹೇಳಿದೆ.

ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್‌ ಅಮಾನತು ಮಾಡಿರುವ ಬಗ್ಗೆ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್‌, ಪಕ್ಷದಿಂದ ಉಚ್ಚಾಟನೆ ಅಥವಾ ವಜಾ ಮಾಡದೇ ಕೇವಲ ಅಮಾನತು ಎನ್ನುವುದು ಕೇವಲ ಕಣ್ಣೊರೆಸುವ ತಂತ್ರವಷ್ಟೇ ಎಂದು ಹೇಳಿದೆ.

ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಪ್ರಜ್ವಲ್ ರೇವಣ್ಣನ ಹೀನ ಕೃತ್ಯವನ್ನು ಒಪ್ಪಿಕೊಳ್ಳಲು ಇನ್ನೂ ತಾಯಾರಿಲ್ಲವೇ ಅಥವಾ ಆತನ ಕೃತ್ಯವನ್ನು ಸಾಧನೆ ಎನ್ನುವಂತೆ ನೋಡುತ್ತಿವೆಯೇ? ಎ2 ಆರೋಪಿಯನ್ನು ಅಮಾನತು ಮಾಡುತ್ತೇವೆ ಎನ್ನುವ ಕುಮಾರಸ್ವಾಮಿಯವರು ಇಷ್ಟಕ್ಕೂ ಎ1 ಆರೋಪಿಯಾಗಿರುವ ರೇವಣ್ಣರ ಬಗ್ಗೆ ಮಾತೇ ಆಡುವುದಿಲ್ಲ ಏಕೆ? ಮಹಿಳೆಯರ ಘನತೆಗಿಂತ ರಾಜಕೀಯವೇ ಶ್ರೇಷ್ಠವಾಯ್ತೆ? ಎಂದು ಪ್ರಶ್ನಿಸಿದೆ. 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News