×
Ad

ನಿಜ ಜೀವನದಲ್ಲಿಯೂ ಖಳ ನಟ ಪ್ರಕಾಶ್ ರೈ: ಆರ್.ಅಶೋಕ್ ವಾಗ್ದಾಳಿ

Update: 2023-08-23 20:19 IST

ಬೆಂಗಳೂರು, ಆ. 23: ‘ಚಿತ್ರನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದ ಕಾರ್ಟೂನ್ ನೋಡಿದ್ದೇನೆ. ಚಹಾ ಮಾರಾಟ ಮಾಡುವ ವ್ಯಕ್ತಿ ಚಿತ್ರದ ಮೂಲಕ ವಿಜ್ಞಾನಿಗಳನ್ನು ಟೀಕೆ ಮಾಡುವುದನ್ನು ನೋಡಿದರೆ ಅವರ ಕೀಳು ಪ್ರವೃತ್ತಿಯನ್ನು ತೋರಿಸುತ್ತದೆ. ನಿಜ ಜೀವನದಲ್ಲೂ ಪ್ರಕಾಶ್ ರೈ ಖಳ ನಟ ಆಗಿದ್ದಾರೆ’ ಎಂದು ಮಾಜಿ ಸಚಿವ ಆರ್.ಅಶೋಕ್ ಟೀಕಿಸಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಾಕಷ್ಟು ಮಂದಿ ಕಲಾವಿದರನ್ನು ನೋಡಿದ್ದೇನೆ. ಈತನೂ ಕಲಾವಿದ. ಆದರೆ ಡಾ.ರಾಜಕುಮಾರ್ ಹಾಗೂ ರಜನಿಕಾಂತ್ ಅವರೆಲ್ಲಾ ಉತ್ತಮ ಕಲಾವಿದರು. ಆದರೆ, ಪ್ರಕಾಶ್ ರೈ ಅವರನ್ನು ಕಲಾವಿದ ಎಂದು ಕರೆಯಲು ಆಗುವುದಿಲ್ಲ. ಸಿನೆಮಾ ರೀತಿಯಲ್ಲೇ ನಿಜ ಜೀವನದಲ್ಲೂ ಪ್ರಕಾಶ್ ರೈ ವಿಲನ್ ಆಗಿದ್ದಾರೆಂದು ವಾಗ್ದಾಳಿ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News